ಮುಂದಿನ 10ವರ್ಷ BJPಗೆ ಮಿಯಾ ಸಮುದಾಯದ ಮತಗಳ ಅಗತ್ಯವಿಲ್ಲ: ಅಸ್ಸಾಂ ಸಿಎಂ

ಗುವಾಹಟಿ: ಅಸ್ಸಾಂ ಮುಖ್ಯಮಂತ್ರಿ ಮತ್ತು ಭಾರತೀಯ ಜನತಾ ಪಕ್ಷದ ಫೈರ್‌ಬ್ರಾಂಡ್ ನಾಯಕ ಹಿಮಂತ ಬಿಸ್ವಾ ಶರ್ಮಾ ಇಲ್ಲಿನ ಸಮುದಾಯದ ಬಗ್ಗೆ ಅಚ್ಚರಿಯ ಹೇಳಿಕೆಯೊಂದನ್ನು ನೀಡಿದ್ದಾರೆ.

ಮುಂದಿನ 10 ವರ್ಷಗಳವರೆಗೆ ‘ಚಾರ್’ ಪ್ರದೇಶದ ‘ಮಿಯಾ’ ಜನರ ಮತಗಳು ಬಿಜೆಪಿಗೆ ಅಗತ್ಯವಿಲ್ಲ ಎಂದು ಹೇಳಿದ್ದಾರೆ.

ಬಾಲ್ಯವಿವಾಹದಂತಹ ಆಚರಣೆಗಳನ್ನು ಬಿಟ್ಟು ಮುಸ್ಲಿಮರು ತಮ್ಮನ್ನು ತಾವು ಸುಧಾರಿಸಿಕೊಳ್ಳುವವರೆಗೂ ನಿಮ್ಮ ಮತಗಳು ನಮಗೆ ಬೇಕಾಗಿಲ್ಲ ಎಂದರು.

ಈ ಕುರಿತು ಹೇಳಿಕೆ ನೀಡಿದ ಅವರು ನೀವು ಯಾವಾಗ ಕುಟುಂಬ ಯೋಜನೆ ಅನುಸರಿಸುತ್ತೀರೋ, ಬಾಲ್ಯವಿವಾಹ ನಿಲ್ಲಿಸುತ್ತೀರೋ, ಮೂಲಭೂತವಾದವನ್ನು ತೊಗಲಿಸುತ್ತೀರೋ, ಆಗ ಬಿಜೆಪಿಗೆ ಮತ ನೀಡಿ ಎಂದು ಹೇಳಿದರು.

‘ಮಿಯಾ’ ಜನರು ಪ್ರಧಾನಿ ನರೇಂದ್ರ ಮೋದಿ ಆಡಳಿತ ಮತ್ತು ಬಿಜೆಪಿಯನ್ನು ಬೆಂಬಲಿಸುತ್ತಾ ಬಂದಿದ್ದಾರೆ ಆದರೆ ಮುಂದಿನ ದಿನಗಳಲ್ಲಿ ಅವರ ಜೇವನದಲ್ಲಿ ಬದಲಾವಣೆ ತರದ ಹೊರತು ನಮಗೆ ಅವರ ಮಠಗಳು ಅಗತ್ಯವಿಲ್ಲ ಎಂದು ಹೇಳಿದ್ದಾರೆ ಒಂದು ವೇಳೆ ಬಿಜೆಪಿ ಪರವಾಗಿ ಘೋಷಣೆಗಳನ್ನು ಕೂಗಲು ಅವಕಾಶವಿದೆ ಏನಿಲ್ಲವೆಂದರೂ ಈ ಸಮುದಾಯದವರು ತಮ್ಮನ್ನು ತಾವು ಸುಧಾರಿಸಿಕೊಳ್ಳಲು ಹತ್ತು ವರ್ಷವಾದರೂ ಬೇಕಾಗುತ್ತದೆ ಅಲ್ಲಿಯವರೆಗೆ ನಮಗೆ ಅವರ ಮತಗಳು ಬೇಕಾಗಿಲ್ಲ ಎಂದು ಹೇಳಿದ್ದಾರೆ.

ಇದು ಸುಧಾರಿಸಲು 10 ವರ್ಷ ತೆಗೆದುಕೊಳ್ಳುತ್ತದೆ:
ಚುನಾವಣೆ ಬಂದಾಗ ನಮಗೆ ಮತ ಹಾಕಬೇಡಿ ಎಂದು ನಾನೇ ಮನವಿ ಮಾಡುತ್ತೇನೆ, ಕುಟುಂಬ ಯೋಜನೆ, ಬಾಲ್ಯವಿವಾಹ ನಿಲ್ಲಿಸಿ, ಮೂಲಭೂತವಾದ ಕೈಬಿಟ್ಟಾಗ ಮಾತ್ರ ನಮಗೆ ಮತ ನೀಡಿ, ಇವುಗಳನ್ನು ಈಡೇರಿಸಲು 10 ವರ್ಷ ಬೇಕಾಗಬಹುದು ಅವಾಗ ನಾವೇ ಬಂದು ನಿಮ್ಮ ಬಳಿ ಮತ ಹಾಕಿ ಎಂದು ಕೇಳುತ್ತೇವೆ ಎಂದರು.

ಷರತ್ತು ವಿಧಿಸಿದ ನಾಯಕ:
ಬಿಜೆಪಿ ಪರ ಮತ ಹಾಕುವ ಮುಸ್ಲಿಂ ಸಮುದಾಯಕ್ಕೆ ಕೆಲ ಷರತ್ತುಗಳನ್ನು ವಿಧಿಸಿದ್ದು ಅದರಂತೆ ಕುಟುಂಬ ಎರಡ್ಮೂರು ಮಕ್ಕಳನ್ನು ಹೊಂದಿರಬಾರದು, ಹೆಣ್ಣು ಮಕ್ಕಳನ್ನು ಶಾಲೆಗೆ ಕಳುಹಿಸಬೇಕು, ಬಾಲ್ಯವಿವಾಹ ಮಾಡಬಾರದು, ಮೂಲಭೂತವಾದ ಬಿಟ್ಟು ಸೂಫಿ ಪಂಥವನ್ನು ಅಳವಡಿಸಿಕೊಳ್ಳಬೇಕು ಎಂದಿದ್ದಾರೆ.

ಶಾಲೆ ನಿರ್ಮಿಸುವುದಾಗಿ ಭರವಸೆ :
‘ಚಾರ್’ ಪ್ರದೇಶದಲ್ಲಿ ಮುಖ್ಯವಾಗಿ ಬಂಗಾಳಿ ಮಾತನಾಡುವ ಮುಸ್ಲಿಮರು ವಾಸಿಸುತ್ತಾರೆ. ಈ ಪ್ರದೇಶದಲ್ಲಿ ಶಾಲೆಗಳಿಲ್ಲ ಎಂದು ಸಿಎಂಗೆ ತಿಳಿಸಿದಾಗ, ಅಂತಹ ಪ್ರದೇಶದಲ್ಲಿ ಶಾಲೆಗಳು ಇಲ್ಲದಿರುವ ಬಗ್ಗೆ ಮಾಹಿತಿ ನೀಡಿದರೆ, ತಕ್ಷಣವೇ ಶಾಲೆಗಳನ್ನು ಸ್ಥಾಪಿಸಲಾಗುವುದು ಎಂದು ಹೇಳಿದರು. “ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ಅಧ್ಯಯನ ಮಾಡಲು ಅವಕಾಶ ಸಿಗುವುದಿಲ್ಲ ಎಂದು ಹೇಳಲು ಸಾಧ್ಯವಿಲ್ಲ, ಮುಂಬರುವ ದಿನಗಳಲ್ಲಿ ನಾವು ಅಲ್ಪಸಂಖ್ಯಾತ ಪ್ರದೇಶಗಳಲ್ಲಿ ಏಳು ಕಾಲೇಜುಗಳನ್ನು ತೆರೆಯುತ್ತೇವೆ” ಎಂದು ಶರ್ಮಾ ಹೇಳಿದರು.

Latest Indian news

Popular Stories