ಟ್ರಕ್ ಡಿಕ್ಕಿ ಹೊಡೆದು ಬೈಕ್ ನಲ್ಲಿದ್ದ 5 ಮಂದಿ ಸಾವು

ರಾಜಸ್ಥಾನದ ಚಿತ್ತೋರ್‌ಗಢ ಜಿಲ್ಲೆಯಲ್ಲಿ ಟ್ರಕ್ ಮೋಟಾರ್‌ ಸೈಕಲ್‌ಗೆ ಡಿಕ್ಕಿ ಹೊಡೆದ ಪರಿಣಾಮ ಒಂದೇ ಕುಟುಂಬದ ಐವರು ಸಾವನ್ನಪ್ಪಿದ್ದಾರೆ.

ಅಪಘಾತದಲ್ಲಿ ಅಪ್ರಾಪ್ತ ಬಾಲಕಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಚಿತ್ತೋರಗಢ-ನಿಂಬಹೇರಾ ಹೆದ್ದಾರಿಯಲ್ಲಿ ಘಟನೆ ನಡೆದಿದೆ.

ಬೈಕ್‌ನಲ್ಲಿ ಆರು ಮಂದಿ ತೆರಳುತ್ತಿದ್ದರು. ಮೃತರ ಪೈಕಿ ಇಬ್ಬರು ಕಾರ್ಖಾನೆಯೊಂದರಲ್ಲಿ ಕೂಲಿ ಕೆಲಸ ಮಾಡಿದ್ದು, ಕೆಲಸ ಮುಗಿಸಿ ಹಿಂತಿರುಗುತ್ತಿದ್ದ ವೇಳೆ ಅಪಘಾತ ಸಂಭವಿಸಿದೆ.

ಮಂಗಳವಾರ ರಾತ್ರಿ 10 ಗಂಟೆಗೆ ನಗರದಿಂದ 7 ಕಿಲೋಮೀಟರ್ ದೂರದಲ್ಲಿರುವ ಭವಾಲಿಯಾ ಗ್ರಾಮದ ಬಳಿ ಭಾರೀ ವಾಹನವೊಂದು ಬೈಕ್‌ಗೆ ಡಿಕ್ಕಿ ಹೊಡೆದಿದೆ. ಒಬ್ಬ ಮಹಿಳೆ ಮತ್ತು ಎಂಟು ವರ್ಷದ ಬಾಲಕಿ ಸೇರಿದಂತೆ ಐದು ಜನರು ಸ್ಥಳದಲ್ಲೇ ಸಾವನ್ನಪ್ಪಿದರೆ, ಮತ್ತೊಬ್ಬ ಬಾಲಕಿ ಗಾಯಗೊಂಡಿದ್ದಾರೆ ಎಂದು ನಿಂಬಹೇರಾ ಸದರ್ ಎಸ್‌ಹೆಚ್‌ಒ ಸಂಜಯ್ ಶರ್ಮಾ ತಿಳಿಸಿದ್ದಾರೆ.

ಮೃತರನ್ನು ರೋಷನ್(32), ಅವರ ಪತ್ನಿ ರಾಮಕನ್ಯಾ(30), ಅವರ ಮಗಳು ತಾರಾ(11), ಅವರ ಸೋದರ ಮಾವ ನಾರು(32) ಮತ್ತು ಅವರ ಸ್ನೇಹಿತ ಜೀವನ್(38) ಎಂದು ಗುರುತಿಸಲಾಗಿದೆ. ರೋಷನ್ ಅವರ ಒಂದು ವರ್ಷದ ಮಗಳು ಮಹಿಮಾ ಅಪಘಾತದಿಂದ ಬದುಕುಳಿದರು ಮತ್ತು ಆಸ್ಪತ್ರೆಗೆ ಸಾಗಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ ಎಂದು ಅವರು ಹೇಳಿದ್ದಾರೆ.

Latest Indian news

Popular Stories