ಮೈಸೂರು : ಹೆಂಡತಿ ಜೊತೆಗೆ ‘ವಿಡಿಯೋ ಕಾಲ್’ ನಲ್ಲಿ ಮಾತನಾಡುವಾಗ ರೈಲಿಗೆ ಸಿಲುಕಿ ವ್ಯಕ್ತಿ ಸಾವು

ಮೈಸೂರು: ರೈಲಿನಲ್ಲಿ ಸಂಚರಿಸುವಾಗ ಅಥವಾ ರೈಲು ಹಳಿಯ ಬಳಿ ನಿಂತಿರುವಾಗ ಯಾವಾಗಲೂ ಜಾಗರೂಕರಾಗಿರಬೇಕು ಏಕೆಂದರೆ ಯಾವುದೇ ಸಂದರ್ಭದಲ್ಲಿಯೂ ಕೂಡ ಮೈ ಮರೆತು ಕುಳಿತಿದ್ದರೆ, ಪ್ರಾಣ ಕಳೆದುಕೊಳ್ಳುವ ಪರಿಸ್ಥಿತಿ ಕೂಡ ಎದುರಾಗುತ್ತದೆ. ಅದೇ ರೀತಿ ಇದೀಗ ಮೈಸೂರಿನಲ್ಲಿ ಹೆಂಡತಿ ಜೊತೆ ವಿಡಿಯೋ ಕಾಲ್ ನಲ್ಲಿ ಮಾತನಾಡುತ್ತಿದ್ದ ಸಂದರ್ಭ ವೇಳೆ ವ್ಯಕ್ತಿ ಸಾವನಪ್ಪಿದ್ದಾನೆ.

ವಿಡಿಯೋ ಕಾಲ್ ವೇಳೆ ರೈಲಿಗೆ ಸಿಲುಕಿ ವ್ಯಕ್ತಿ ಸಾವನನಪ್ಪಿರುವ ಘಟನೆ ನಡೆದಿದೆ. ಹೆಂಡತಿಗೆ ವಿಡಿಯೋ ಕಾಲ್ ಮಾಡುತ್ತಿದ್ದಾಗ ಈ ದುರಂತ ಸಂಭವಿಸಿದೆ. ಘಟನೆಯು ದೊಡ್ಡ ಕವಲಂದೆ ಗ್ರಾಮದ ಬಳಿ ನಡೆದಿದೆ ಎನ್ನಲಾಗುತ್ತಿದೆ.ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕಿನ ಗ್ರಾಮದಲ್ಲಿ ಈ ಘಟನೆ ನಡೆದಿದೆ.

ಬಿಹಾರ ಮೂಲದ ಮನು ಕುಮಾರ್ (26) ಸಾವನ್ನಪ್ಪಿರುವ ದುರ್ದೈವಿಯಾಗಿದ್ದಾನೆ.ದೊಡ್ಡ ಕವಲಂದೆಯಲ್ಲಿ ಬಿಹಾರದ ಈ ವ್ಯಕ್ತಿ ಕಾರ್ಪೆಂಟರ್ ಆಗಿ ಕೆಲಸ ಮಾಡುತ್ತಿದ್ದ.ಈ ವೇಳೆ ರೈಲಿನಲ್ಲಿ ತೆರಳುತ್ತಿದ್ದಾಗ ವಿಡಿಯೋ ಕಾಲ್ ನಲ್ಲಿ ಮಾತನಾಡುತ್ತಾ ಬರುವಾಗ ದುರಂತ ಸಂಭವಿಸಿದೆ. ನಂಜನಗೂಡು ರೈಲ್ವೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Latest Indian news

Popular Stories