ಶಿರ್ವ: ಮಾಜಿ ಗ್ರಾ.ಪಂ. ಸದಸ್ಯೆ ಜೆನೆಟ್‌ ಲೋಬೊ ನಿಧನ

ಶಿರ್ವ: ಪ್ರಗತಿಪರ ಕೃಷಿಕೆ,ಮಹಿಳಾ ಉದ್ಯಮಿ, ಮುದರಂಗಡಿ ಗ್ರಾ.ಪಂ. ಮಾಜಿ ಸದಸ್ಯೆಪಿಲಾರು ನಿವಾಸಿ ಜೆನೆಟ್‌ ಲೋಬೊ (74) ಅವರು ಮಾ. 12ರಂದು ಸ್ವಗೃಹದಲ್ಲಿ ನಿಧನ ಹೊಂದಿದರು. ಮೃತರು ಇಬ್ಬರು ಪುತ್ರರು ಮತ್ತು ಪುತ್ರಿಯನ್ನು ಅಗಲಿದ್ದಾರೆ.

ಅರಣ್ಯ ಇಲಾಖೆಯ ಪಿಲಾರು ಗ್ರಾಮ ಸಮಿತಿಯ ಅಧ್ಯಕ್ಷರಾಗಿದ್ದ ಅವರು ದ.ಕ.ಜಿಲ್ಲೆಯ ಭೂನ್ಯಾಯ ಮಂಡಳಿಯ ಸದಸ್ಯರಾಗಿ, ದ.ಕ.ಜಿಲ್ಲೆಯ ಶಿಕ್ಷಕರ ನೇಮಕಾತಿ ಸಮಿತಿಯ ಸದಸ್ಯರಾಗಿ,ಪೆರ್ನಾಲ್‌ ಫಾತಿಮಾ ಮಾತೆಯ ಚರ್ಚ್‌ನ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು.

ಕಾಂಗ್ರೆಸ್‌ ಪಕ್ಷದ ಸಕ್ರೀಯ ಸದಸ್ಯರಾಗಿದ್ದ ಅವರು ಬಳಿಕ ಜನತಾ ಪಕ್ಷ ಸೇರಿ ಕಾಪು ವಿಧಾನಸಭಾ ಚುನಾವಣೆಯಲ್ಲಿ ಮಾಜಿ ಸಚಿವ ದಿ| ವಸಂತ ವಿ. ಸಾಲ್ಯಾನ್‌ ಅವರ ವಿರುದ್ಧ ಸ್ಪರ್ಧಿಸಿದ್ದರು. ಕೊಡುಗೈ ದಾನಿಯಾಗಿದ್ದ ಅವರು ಸಮಾಜದ ಎಲ್ಲಾ ವರ್ಗದ ಜನರ ಆಶೋತ್ತರಗಳನ್ನು ಈಡೇರಿಸುವಲ್ಲಿ ಶ್ರಮಿಸಿದ್ದರು.

Latest Indian news

Popular Stories