ಅಲ್ಪಸಂಖ್ಯಾತರಿಗೆ ಗೋಮಾಂಸ ತಿನ್ನಲು ಅವಕಾಶ ನೀಡುತ್ತಾರೆ; ಕಾಂಗ್ರೆಸ್‌ ವಿರುದ್ಧ ಗುಡುಗಿದ ಯೋಗಿ ಆದಿತ್ಯನಾಥ್

ಲಕ್ನೋ: ದೇಶಾದ್ಯಂತ ಲೋಕಸಭಾ ಚುನಾವಣಾ (Lok Sabha Election 2024) ಕಾವು ಜೋರಾಗಿಯೇ ನಡೆಯುತ್ತಿದ್ದು, ಕಾಂಗ್ರೆಸ್‌ ಬಿಜೆಪಿ ಸೇರಿದಂತೆ ವಿವಿಧ ಪಕ್ಷಗಳು ಪರಸ್ಪರ ಕೆಸರೆರಚಾಟ ನಡೆಸುತ್ತಿವೆ. ಈತನ್ಮಧ್ಯೆ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ (Yogi Adityanath) ಕಾಂಗ್ರೆಸ್‌ ವಿರುದ್ಧ ಹರಿಹಾಯ್ದಿದ್ದಾರೆ.

ಉತ್ತರ ಪ್ರದೇಶದ ಮೊರಾದಾಬಾದ್‌ನಲ್ಲಿ ನಡೆದ ಚುನಾವಣಾ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಯುಪಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು. ಅಲ್ಪಸಂಖ್ಯಾತರಿಗೆ ಗೋಮಾಂಸ ತಿನ್ನುವ ಹಕ್ಕನ್ನು ನೀಡಲು ಕಾಂಗ್ರೆಸ್ ಬಯಸುತ್ತಿದೆ ಮತ್ತು ಇದು ಗೋಹತ್ಯೆಗೆ ಅನುಮತಿ ನೀಡಿದಂತೆ ಎಂದು ಆರೋಪಿಸಿದ್ದಾರೆ.

‘ಈ ನಾಚಿಕೆಯಿಲ್ಲದವರು ಗೋಮಾಂಸ ತಿನ್ನುವ ಹಕ್ಕನ್ನು ಭರವಸೆ ನೀಡುತ್ತಾರೆ, ಆದರೆ ನಮ್ಮ ಧರ್ಮಗ್ರಂಥಗಳಲ್ಲಿ ಗೋವನ್ನು ತಾಯಿ ಎಂದು ಕರೆಯಲಾಗುತ್ತದೆ, ಅವರು ಗೋವನ್ನು ಕಟುಕರಿಗೆ ಒಪ್ಪಿಸಲು ಬಯಸುತ್ತಾರೆ, ಇದನ್ನು ಭಾರತ ಎಂದಾದರೂ ಒಪ್ಪಿಕೊಳ್ಳುತ್ತದೆಯೇ? ಎಂದು ಪ್ರಶ್ನಿಸಿರುವ ಆದಿತ್ಯನಾಥ್, ಅಲ್ಪಸಂಖ್ಯಾತರಿಗೆ ತಮ್ಮ ಇಚ್ಛೆಯ ಆಹಾರ ಸೇವಿಸಲು ಸ್ವಾತಂತ್ರ್ಯ ನೀಡಲು ಬಯಸಿದ್ದೇನೆ ಅಂದರೆ ಅವರು ಗೋಹತ್ಯೆಗೆ ಅವಕಾಶ ನೀಡುವ ಬಗ್ಗೆ ಮಾತನಾಡುತ್ತಿದ್ದಾರೆ ಎಂದು ಹೇಳಿದರು.

ಈತನ್ಮಧ್ಯೆ ಈಶಾನ್ಯ ಭಾರತ, ಕೇರಳದಲ್ಲಿ ಗೋಮಾಂಸದ ಪರವಾಗಿ ಬಿಜೆಪಿ ಮುಖಂಡರು ಮಾತನಾಡಿರುವ ಹೇಳಿಕೆಗಳು ಕೂಡ ಸದ್ದು ಮಾಡುತ್ತಿದೆ.

Latest Indian news

Popular Stories