ಅಧಿವೇಶನದಲ್ಲಿ ಆಡಳಿತ ಪಕ್ಷ-ವಿರೋಧ ಪಕ್ಷ ಜಟಾಪಟಿ; 133 ಕೋಟಿ ನಷ್ಟ!

ನವದೆಹಲಿ: ಆಡಳಿತ ಪಕ್ಷ ಮತ್ತು ವಿರೋಧ ಪಕ್ಷಗಳ ಜಟಾಪಟಿಯಿಂದಾಗಿ ಸರಿಯಾಗಿ ಮಳೆಗಾಲದ ಅಧಿವೇಶನ ನಡೆಯದ ಕಾರಣ ಸುಮಾರು 133 ಕೋಟಿ ನಷ್ಟವಾಗಿಯೆಂದು ಸರಕಾರಿ ಮೂಲಗಳು ತಿಳಿಸಿವೆ.

ಪೆಗಾಸಸ್ ಹಗರಣ, ಕೃಷಿ ತಿದ್ದುಪಡಿ ಕಾಯಿದೆಯ ಕುರಿತು ಚರ್ಚೆ ನಡೆಯಬೇಕು. ಸತ್ಯಾಸತ್ಯತೆ ಜನರ ಮುಂದೆ ಬರಬೇಕೆಂದು ವಿರೋಧ ಪಕ್ಷಗಳು ಪಟ್ಟು ಹಿಡಿದಿದ್ದಾರೆ. ಆದರೆ ಆಡಳಿತ ಪಕ್ಷ ಮಾತ್ರ ಚರ್ಚೆಗೆ ಅವಕಾಶ ಕಲ್ಪಿಸುತ್ತಿಲ್ಲ. ಹೀಗೆ ಇಬ್ಬರ ಸಂಘರ್ಷದ ನಡುವೆ ಜನರ ತೆರಿಗೆ ಹಣ ಪೋಲಾಗುತ್ತಿದೆ. ಈಗಾಗಲೇ ಕಾಂಗ್ರೆಸ್ ಪೆಗಾಸಸ್ ವಿಚಾರದಲ್ಲಿ ತನಿಖೆಯಾಗಬೇಕೆಂದು ಆಗ್ರಹಿಸಿದೆ. ಈ ತನಿಖೆಯನ್ನು ಸರ್ವೋಚ್ಚ ನ್ಯಾಯಾಲಯದ ಹಾಲಿ ಅಥವಾ ನಿವೃತ್ತ ನ್ಯಾಯಾಧೀಶರು ನಡೆಸಬೇಕೆಂದು ಆಗ್ರಹಿಸುತ್ತಿದ್ದಾರೆ. ಆದರೆ ಆಡಳಿತ ಪಕ್ಷ ಇದನ್ನು ನಿರಾಕರಿಸುತ್ತಿದೆ.

ಈ ಜಟಾಪಟಿಯಲ್ಲಿ ಲೋಕಸಭಾ ಅಧಿವೇಶನವು 54 ಗಂಟೆಯಲ್ಲಿ ಏಳು ಗಂಟೆ ಮಾತ್ರ ನಡೆದಿದೆ. ರಾಜ್ಯಸಭಾ ಅಧಿವೇಶನ 53 ಗಂಟೆಯಲ್ಲಿ ಕೇವಲ 11 ಗಂಟೆಯಷ್ಟುಗಳ ಕಾಲ ನಡೆದಿದೆಯೆಂದು ಸರಕಾರಿ ಮೂಲಗಳು ತಿಳಿಸಿವೆ. ಒಟ್ಟಿನಲ್ಲಿ 107 ಗಂಟೆಯಲ್ಲಿ ಕೇವಲ 18 ಗಂಟೆಗಳ ಕಾಲ ಅಧಿವೇಶನ ಕಾರ್ಯಚರಿಸಿದೆ. ಉಳಿದಂತೆ ವಿರೋಧ ಪಕ್ಷಗಳ ಬೇಡಿಕೆಯನ್ನು ಈಡೇರಿಸದೆ ದೀರ್ಘಕಾಲ ಅಧಿವೇಶನ ನಡೆದಿಲ್ಲ. ಇದೀಗ ಕಾಂಗ್ರೆಸ್ ಅಧಿವೇಶನ ನಡೆಸಲು ಬಿಡುತ್ತಿಲ್ಲವೆಂಬ ಆಪಾದನೆ ಕೂಡ ಬಿಜೆಪಿ ಮಾಡುತ್ತಿದೆ. ಅದರ ಭಾಗವಾಗಿ ಸರಕಾರ 133 ಕೋಟಿ ನಷ್ಟದ ವಿಚಾರ ಸರಕಾರಿ ಮೂಲಗಳಿಂದ ಹೊರಬಿದ್ದಿದೆ ಎನ್ನಲಾಗುತ್ತಿದೆ.

Latest Indian news

Popular Stories