PoliticsFeatured Story

ರಾಜ್ಯ ಬಿಜೆಪಿ ಸಚಿವ ಸಂಪುಟದಲ್ಲಿ ಮುಸ್ಲಿಮ್, ಕ್ರೈಸ್ತ ಸಮುದಾಯಕ್ಕಿಲ್ಲ ಸಚಿವ ಸ್ಥಾನ – ಸಬ್ ಕಾ ಸಾಥ್ ಸಬ್ ಕಾ ವಿಕಾಸ್’ಗೆ ಎಳ್ಳುನೀರು!

ಬೆಂಗಳೂರು: ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಸಂಪುಟದಲ್ಲಿ 29 ಮಂದಿ ಶಾಸಕರಿಗೆ ಜಾತಿವಾರು ಸ್ಥಾನ ಕಲ್ಪಿಸಲಾಗಿದೆ‌. ಆದರೆ ರಾಜ್ಯ ಪ್ರಮುಖದ ಸಮುದಾಯವಾದ ಮುಸ್ಲಿಂ ಮತ್ತು ಕ್ರೈಸ್ತರನ್ನು ಸಂಪೂರ್ಣವಾಗಿ ಕಡೆಗಣಿಸಿದ್ದಾರೆ.

ನರೇಂದ್ರ ಮೋದಿಯವರ ಸಬ್ಕಾ ಸಾಥ್ ಸಬ್ಕಾ ವಿಕಾಸ್ ಎಂಬ ಘೋಷಣೆ ಸಂಪೂರ್ಣ ಸುಳ್ಳು ಎಂಬುವುದನ್ನು ಮತ್ತೊಮ್ಮೆ ಸಾಬೀತಾಗಿದೆ. ಲಿಂಗಾಯತ್, ಒಕ್ಕಲಿಗ, ಹಿಂದುಳಿದ ಮತ್ತು ದಲಿತ ಸಮುದಾಯದ ಶಾಸಕರಿಗೆ ಸಚಿವ ಸ್ಥಾನ ನೀಡಲಾಗಿದೆ.

ಇನ್ನು ಬಿಜೆಪಿಯಲ್ಲಿ ಮುಸ್ಲಿಂ ಮತ್ತು ಕ್ರೈಸ್ತ ಸಮುದಾಯದ ಶಾಸಕರು ಇಲ್ಲ ಎಂಬುವುದು ವಾದ. ಯಡಿಯೂರಪ್ಪ ಮಗ ವಿಜಯೇಂದ್ರ ಅವರಿಗೂ ಸ್ಥಾನ ನೀಡಲು ಹೊರಟಿದ್ದು ಶಾಸಕ ಸ್ಥಾನ ಇಲ್ಲದೆಯೇ ಆದರೆ ರಾಜಕೀಯ ಲೆಕ್ಕಚಾರದ ಆಧಾರದಲ್ಲಿ ಅವರ ಸ್ಥಾನ ಕೈ ತಪ್ಪಿದೆ. ಬಿಜೆಪಿಯ ಹಿರಿಯ ಮುಸ್ಲಿಂ ನಾಯಕರಾದ ರಹೀಮ್ ಉಚ್ಚಿಲ, ಅನ್ವರ್ ಮಣಿಪಾಡಿ ಅವರಿಗೆ ಸಚಿವ ಸ್ಥಾನ ಸಿಗುವ ಸಾಧ್ಯತೆಯ ಕುರಿತು ಚರ್ಚೆ ನಡೆದಿತ್ತು.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Back to top button