ನಟ ಪ್ರಕಾಶ ರಾಜ್ ಒಬ್ಬ ಅಯೋಗ್ಯ: ಮಾಜಿ ಸಚಿವ ಈಶ್ವರಪ್ಪ

ವಿಜಯಪುರ: ನಟ ಪ್ರಕಾಶ ರಾಜ್ ಒಬ್ಬ ಅಯೋಗ್ಯ. ಪ್ರಕಾಶ್ ರಾಜ್ ಅಪ್ಪ-ಅಮ್ಮನಿಗೆ ಹುಟ್ಟಿದ್ದಾನಾ ಅನ್ನೋದಕ್ಕೆ ಗ್ಯಾರಂಟಿ ಏನು? ಎಂದು ಮಾಜಿ ಸಚಿವ ಕೆ ಎಸ್ ಈಶ್ವರಪ್ಪ ಬಹುಭಾಷಾ ನಟ ಪ್ರಕಾಶ ರಾಜ್ ವಿರುದ್ಧ ವಾಗ್ದಾಳಿ ನಡೆಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಟ ಪ್ರಕಾಶ ರಾಜ್ ಯಾರಿಗೆ ಹುಟ್ಟಿದ್ದಾನೆ ಎಂದು ತಾಯಿನಾ ಕೇಳಿದ್ದಾನಾ? ತಾಯಿ ಹೇಳಿದಾಗಲೇ ಅಪ್ಪ ಯಾರು ಅಂತ ಗೊತ್ತಾಗಿದೆ ಅಲ್ವಾ ಪ್ರಕಾಶ್ ರಾಜ್ ತಾಯಿಯ ಬಗ್ಗೆ ನನಗೆ ಅಪಾರ ಗೌರವ ಇದೆ ಎಂದರು. ಇನ್ನು ಗೃಹ ಸಚಿವ ಜಿ.ಪರಮೇಶ್ವರ ಅವರಿಗೆ ತಾಕತ್ತು ಇದ್ದರೆ ಮುಸಲ್ಮಾನರ ಹುಟ್ಟಿನ ಬಗ್ಗೆ ಪ್ರಶ್ನಿಸಲಿ. ಮುಸ್ಲಿಂರು ಎಲ್ಲಿ ಹುಟ್ಟಿದ್ರು, ಎಲ್ಲಿಂದ ಬಂದ್ರು ಎಂದು ಪ್ರಶ್ನಿಸಲಿ. ಮೈ ಮೇಲೆ ಜ್ಞಾನ ಇಟ್ಟುಕೊಂಡು ಬಾಯಿ ಬಿಡಬೇಕು ಎಂದರು.

ಉದಯ ಸ್ಟ್ಯಾಲಿನ್ ಒಬ್ಬ ಅಯೋಗ್ಯ, ಹುಚ್ಚ. ಉದಯನಿಧಿಗು ಸನಾತನ ಧರ್ಮಕ್ಕು ಏನ್ ಸಂಬಂಧ..? ಸ್ಟ್ಯಾಲಿನ್ ಯಾರ್ ರಿ? ಸಾಧು-ಸಂತರ ತಪಸ್ಸಿನಿಂದ ಸನಾತನ ಧರ್ಮವಾಗಿದೆ. ಧರ್ಮವನ್ನ ಮುಟ್ಟಿದವನು ಯಾವನೂ ಉದ್ಧಾರ ಆಗಲ್ಲ. ಸನಾತನ ಧರ್ಮದ ನಾಶ ಅವರಪ್ಪ, ಅಜ್ಜನಿಂದಲು ಆಗಿಲ್ಲ, ಆಗೋದು ಇಲ್ಲ. ಧರ್ಮ ವಿರುದ್ಧ ಯಾರು ರಾಕ್ಷಸಿ ಪ್ರವೃತ್ತಿ ತೋರಿಸಿದ್ದಾರೊ ಅವರು ನಾಶವಾಗಿ ಹೋಗ್ತಾರೆ ಎಂದರು.

Latest Indian news

Popular Stories