ಹೂಡೆ: ರಂಝಾನ್ ತಿಂಗಳ ಉಪವಾಸದ ಹಿನ್ನಲೆಯಲ್ಲಿ ರವಿವಾರ ಹೂಡೆಯ ಉರ್ದು ಶಾಲಾ ಮೈದಾನದಲ್ಲಿ ಸೌಹರ್ದ ಇಫ್ತಾರ್ ಕೂಟ ಆಯೋಜಿಸಲಾಗಿತ್ತು.
ಇಫ್ತಾರ್ ಕೂಟದಲ್ಲಿ ಹಿಂದೂ, ಮುಸ್ಲಿಂ, ಕ್ರೈಸ್ತರು ಭಾಗವಹಿಸಿ ಸೌಹಾರ್ದ ಕ್ಷಣಕ್ಕೆ ಸಾಕ್ಷಿಯಾದರು.ಹೂಡೆ ಪರಿಸರದ ಮುಸ್ಲಿಂ ಯುವಕರು ಕೂಡಿಕೊಂಡು ಆಯೋಜಿಸಿದ ಸೌಹಾರ್ದ ಕೂಟದಲ್ಲಿ ನೂರಾರು ಜನರು ಭಾಗವಹಿಸಿ ಉಪವಾಸ ಪಾರಾಯಣಗೈದರು.
ಇಫ್ತಾರ್ ನಂತರ ಊರ ಸಮಸ್ತ ನಾಗರಿಕರಿಗೆ ಊಟದ ವ್ಯವಸ್ಥೆ ಮಾಡಲಾಗಿತ್ತು. ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು, ಸಮಾಜ ಸೇವಕರು ಸೇರಿದಂತೆ ಹಲವಾರು ಗಣ್ಯರು ಭಾಗವಹಿಸಿದ್ದರು.