ಉಡುಪಿ ಮುಸ್ಲಿಮ್ ವೆಲ್ಫೇರ್ ಅಸೋಸಿಯೇಶನ್ ಅಧ್ಯಕ್ಷರಾಗಿ ಮುನೀರ್ ಮುಹಮ್ಮದ್

ಉಡುಪಿ: ಉಡುಪಿ ಮುಸ್ಲಿಮ್ ವೆಲ್ಫೇರ್ ಅಸೋಸಿಯೇಷನ್ನ 41ನೆ ಮಹಾಸಭೆ ಇತ್ತೀಚೆಗೆ ಸಂಸ್ಥೆಯ ಕಚೇರಿಯಲ್ಲಿ ನಡೆಯಿತು.


ಈ ಸಂದರ್ಭದಲ್ಲಿ 2023-2025ನೆ ಸಾಲಿನ ಪದಾಧಿಕಾರಿಗಳ ಮತ್ತು ಸಮಿತಿ ಸದಸ್ಯರ ಆಯ್ಕೆ ಮಾಡಲಾಯಿತು. ಅಧ್ಯಕ್ಷರಾಗಿ ಮುನೀರ್ ಮಹಮ್ಮದ್, ಉಪಾಧ್ಯಕ್ಷರಾಗಿ ರಿಯಾಝ್ ಅಹಮದ್ ಕುಕ್ಕಿಕಟ್ಟೆ, ಪ್ರಧಾನ ಕಾರ್ಯದರ್ಶಿ ಯಾಗಿ ವಿ.ಎಸ್.ಉಮರ್, ಜೊತೆ ಕಾರ್ಯದರ್ಶಿಯಾಗಿ ಪರ್ವೇಜ್ ಶೇಕ್, ಖಜಾಂಜಿಯಾಗಿ ಇಕ್ವಾನ್ ರೌಫ್, ಸದಸ್ಯರಾಗಿ ರಿಯಾಝ್ ಅಹಮದ್ ಉಡುಪಿ, ಕಲ್ಯಾಣಪುರ ಅಬ್ದುಲ್ ಗಫೂರ್, ಯು.ಇಬ್ರಾಹಿಂ, ಅಬ್ದುಲ್ ಗಫೂರ್ ಆದಿಉಡುಪಿ, ಖಾಲಿದ್ ಅಬ್ದುಲ್ ಅಝೀಝ್, ಎಸ್.ಎ. ಶಮೀಮ್, ಮುಹಮ್ಮದ್ ಸಲೀಂ ಬೈಲೂರು, ಇಕ್ಬಾಲ್ ಮನ್ನಾ, ಮಹಮ್ಮದ್ ಹನೀಫ್, ಸುಲೈಮಾನ್ ಆಯ್ಕೆಯಾದರು

Latest Indian news

Popular Stories