PRESS RELEASE / ORGANISATIONS

ಹೂಡೆ | ಸಾಲಿಹಾತ್ ಶಿಕ್ಷಣ ಸಂಸ್ಥೆಯ ವತಿಯಿಂದ ‘ರಿಫ್ಲೆಕ್ಷನ್’ ಸ್ಮರಣಾ ಸಂಚಿಕೆ ಬಿಡುಗಡೆ

ಹೂಡೆ: ಸಾಲಿಹಾತ್ ಸಮೂಹ ಶಿಕ್ಷಣ ಸಂಸ್ಥೆಯ ವತಿಯಿಂದ “ರಿಫ್ಲೆಕ್ಷನ್” ಸ್ಮರಣಾ ಸಂಚಿಕೆಯನ್ನು ಸಾಲಿಹಾತ್ ಸಭಾಂಗಣದಲ್ಲಿ ಡಾ.ಗಣನಾಥ್ ಎಕ್ಕರ್ ಬಿಡುಗಡೆಗೊಳಿಸಿದರು.

ನಂತರ ಮಾತನಾಡಿದ ಅವರು, “ಶಿಕ್ಷಣ ಎಂಬುವುದು ವ್ಯಕ್ತಿಗೆ ಕಣ್ಣು ಇದ್ದಂತೆ ಅದು ಜೀವನಕ್ಕೆ ಮಾರ್ಗದರ್ಶನ‌ ಮಾಡುತ್ತದೆ. ಶಿಕ್ಷಣದಿಂದ ಜ್ಞಾನ ಪ್ರಾಪ್ತಿಯಾಗುತ್ತದೆ. ಅದು ಮನುಷ್ಯನನ್ನು ಎತ್ತರಕ್ಕೆ ಕೊಂಡೊಯ್ಯುತ್ತದೆ ಎಂದರು”.

ವಿದ್ಯಾರ್ಥಿಗಳು ಕ್ರಿಯಾತ್ಮಕತೆಯನ್ನು ಬೆಳೆಸಿಕೊಳ್ಳಬೇಕು. ಅದು ಈಗಿನ ಸ್ಪರ್ಧಾತ್ಮಕ ಯುಗದಲ್ಲಿ ಅತೀ ಅಗತ್ಯ. ” ರಿಫ್ಲೆಕ್ಷನ್ ” ಎಂಬ ಸ್ಮರಣಾ ಸಂಚಿಕೆ ಅತ್ಯುತ್ತಮವಾಗಿ ಮೂಡಿ ಬಂದಿದ್ದು ಇದು ವಿದ್ಯಾರ್ಥಿಗಳಿಗೆ ಕ್ರಿಯಾತ್ಮಕತೆಗೆ ವೇದಿಕೆ ಕಲ್ಪಿಸುತ್ತದೆ ಎಂದರು.

ವಿದ್ಯಾರ್ಥಿಗಳು ನಮ್ಮ ದೇಶದ ಸಂವಿಧಾನವನ್ನು ಅರ್ಥೈಸಿಕೊಂಡಲ್ಲಿ ಒಳ್ಳೆಯ ಜೀವನಕ್ಕೆ ನಾಂದಿ ಹಾಡುತ್ತದೆ. ಸಮಾನತೆಯ ಕುರಿತಿನ ಅರಿವು ಮೂಡುತ್ತದೆ. ಸಾಮರಸ್ಯದ ಬದುಕು ನಮ್ಮದಾಗುತ್ತದೆ. ವಿದ್ಯಾರ್ಥಿಗಳು ಈ ನಿಟ್ಟಿನಲ್ಲಿ ಚಿಂತಿಸಬೇಕೆಂದು ಕರೆ ನೀಡಿದರು.

IMG 20230314 WA0019 PRESS RELEASE / ORGANISATIONS
IMG 20230314 WA0024 PRESS RELEASE / ORGANISATIONS
IMG 20230314 WA0023 PRESS RELEASE / ORGANISATIONS

ಈ ಸಂದರ್ಭದಲ್ಲಿ ಸನ್ಮಾರ್ಗ ವಾರ ಪತ್ರಿಕೆಯ ಸಂಪಾದಕರಾದ ಎಕೆ ಕುಕ್ಕಿಲ, ಅತೀಕ್ ಉರ್ ರೆಹಮಾನ್, ಮುಹಮ್ಮದೀಯ ಎಜುಕೇಷನ್ ಟ್ರಸ್ಟ್ ನ ಅಧ್ಯಕ್ಷರಾದ ಇಸ್ಮಾಯಿಲ್ ಸಾಹೇಬ್, ಡಾ.ಶಹನಾವಝ್, ಜಮಾಅತೆ ಇಸ್ಲಾಮಿ ಹಿಂದ್ ಹೂಡೆಯ ಅಧ್ಯಕ್ಷರಾದ ಅಬ್ದುಲ್ ಕಾದೀರ್ ಮೊಯ್ದಿನ್, ರಿಫ್ಲೆಕ್ಷನ್ ಸ್ಮರಣಾ ಸಂಚಿಕೆಯ ಪ್ರಧಾನ ಸಂಪಾದಕ ಜಿ.ಎಮ್ ಶರೀಫ್ ಮಾತನಾಡಿದರು.

ಈ ಸಂದರ್ಭದಲ್ಲಿ ರಿಫ್ಲೆಕ್ಷನ್ ಸ್ಮರಣಾ ಸಂಚಿಕೆಯ ಸಂಪಾದಕೀಯ ಮಂಡಳಿಯನ್ನು ಸನ್ಮಾನಿಸಲಾಯಿತು.

ಇದ್ರಿಸ್ ಹೂಡೆ ಪ್ರಸ್ತಾವಿಕವಾಗಿ ಮಾತನಾಡಿ ಸಂಸ್ಥೆ ನಡೆದು ಬಂದ ದಾರಿಯನ್ನು ವಿವರಿಸಿದರು. ವಿದ್ಯಾರ್ಥಿನಿ ಝಿಯಾ ಮೆಹ್ವಿಷ್ ಪ್ರಾರ್ಥನೆಗೈದರು. ಪಿಯುಸಿಯ ಪ್ರಾಂಶುಪಾಲೆ ದಿವ್ಯ ಪೈ ಸ್ವಾಗತಿಸಿದರು. ಜಿ.ಇಮ್ತಿಯಾಝ್ ಧನ್ಯವಾದವಿತ್ತರು. ಶಿಕ್ಷಕಿ ಆಶಾ ಲತಾ ನಿರೂಪಿಸಿದರು.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Back to top button