
PRESS RELEASE / ORGANISATIONS
ಎಸ್.ಎಂ. ಆರ್. ಪಬ್ಲಿಕ್ ಸ್ಕೂಲ್ ಶಿಕ್ಷಕ ರಕ್ಷಕ ಸಭೆ
ಮಂಗಳೂರು, ಅ.31: ಇಲ್ಲಿನ, ಎಸ್.ಎಂ. ಆರ್. ಪಬ್ಲಿಕ್ ಸ್ಕೂಲ್ ನಲ್ಲಿ ಕಳೆದ 28/10/2023 ಶನಿವಾರದಂದು ಪೋಷಕ-ಶಿಕ್ಷಕರ ಸಭೆಯನ್ನು ಆಯೋಜಿಸಲಾಯಿತು.
ಈ ಮಾಹಿತಿಯನ್ನು, ಸಾಕಷ್ಟು ಮುಂಚಿತವಾಗಿ ವಿದ್ಯಾರ್ಥಿಗಳ ಅಧಿಕೃತ ವಾಟ್ಸಪ್ ಗುಂಪಿನಲ್ಲಿ ತರಗತಿ ಶಿಕ್ಷಕರು ಹಂಚಿಕೊಳ್ಳುವ ಮೂಲಕ ಪೋಷಕರಿಗೆ ತಿಳಿಸಲಾಗಿತ್ತು.
1 ರಿಂದ 8 ನೇ ತರಗತಿಯವರೆಗಿನ ಹೆಚ್ಚಿನ ಎಲ್ಲಾ ಪೋಷಕರು ಹಾಜರಿದ್ದ ಈ ಸಭೆಯಲ್ಲಿ, ಪಾಲಕರು, ವರ್ಗ ಶಿಕ್ಷಕರು, ವಿಷಯ ಶಿಕ್ಷಕರು ಮತ್ತು ಮುಖ್ಯೋಪಾಧ್ಯಾಯಿನಿ ಹಾಗೂ ವರದಿಗಾರರ ನಡುವೆ ಸಂವಾದ ನಡೆಸಲಾಯಿತು,
ಪ್ರತ್ಯೇಕ ವಿಷಯಗಳಲ್ಲಿ ವಿದ್ಯಾರ್ಥಿಗಳ ಸಾಧನೆ, ತರಗತಿಗಳಲ್ಲಿ ವಿದ್ಯಾರ್ಥಿಗಳ ಶಿಸ್ತು ಮತ್ತು ಅವರ, ಶೇಕಡಾವಾರು ಹಾಜರಾತಿ ಕುರಿತು ಚರ್ಚೆ ನಡೆಸಲಾಯಿತು.
ಅಲ್ಲದೆ, ಹೊಸ PTA ಸದಸ್ಯರನ್ನು ನಾಮನಿರ್ದೇಶನ ಮಾಡಲಾಯಿತು ಮತ್ತು ಚುನಾಯಿಸಲಾಯಿತು.
ಅದರಂತೆ, ಅಧ್ಯಕ್ಷರಾಗಿ ಸಂದೀಪ್ ಮತ್ತು ಉಪಾಧ್ಯಕ್ಷರಾಗಿ ಸಮೀದರವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.




