ಉಡುಪಿ | ರಾಜ್ಯ ಮಹಿಳಾ ದೌರ್ಜನ್ಯ ವಿರೋಧಿ ಒಕ್ಕೂಟದ ವತಿಯಿಂದ ಮಾ.8 ಹಾಗೂ 9ರಂದು ಮಹಿಳಾ ಚೈತನ್ಯ ದಿನ

ಉಡುಪಿ, ಮಾ.6: ರಾಜ್ಯ ಮಹಿಳಾ ದೌರ್ಜನ್ಯ ವಿರೋಧಿ ಒಕ್ಕೂಟದ ವತಿಯಿಂದ ಮಾ.8 ಹಾಗೂ 9ರಂದು ಮಹಿಳಾ ಚೈತನ್ಯ ದಿನ ಉಡುಪಿಯಲ್ಲಿ ನಡೆಯಲಿದೆ ಎಂದು ವಾಣಿ ಪೆರಿಯೋಡಿ ಪತ್ರಿಕಾಗೋಷ್ಠಿಯಲ್ಲಿ ಬುಧವಾರ ತಿಳಿಸಿದರು.

ಮಾ.8ರಂದು ಅಜ್ಜರಕಾಡು ಪುರಭವನದಲ್ಲಿ ಬೆಳಗ್ಗೆ 10ರಿಂದ ಸಂಜೆ 5ರವರೆಗೆ ಮಹಿಳಾ ಪ್ರಾತಿನಿಧ್ಯ; ಆಶಯ ಮತ್ತು ವಾಸ್ತವ ವಿಷಯದ ಕುರಿತು ವಿಚಾರ ಸಂಕಿರಣ ನಡೆಯಲಿದೆ. ಸಂಜೆ 5.30ಕ್ಕೆ ಜೋಡುಕಟ್ಟೆಯಲ್ಲಿ ಬೆಳಕಿನೊಂದಿಗೆ ‘ಕಪ್ಪು ಉಡುಗೆಯಲ್ಲಿ ಮಹಿಳೆಯರು’ ವೌನ ಜಾಗೃತಿ ನಡೆಯಲಿದೆ.

ಮಾ.9ರಂದು ಬೆಳಗ್ಗೆ 10ಕ್ಕೆ ಹುತಾತ್ಮ ಚೌಕದಲ್ಲಿ ಹಕ್ಕೊತ್ತಾಯ ಜಾಥಾ, ಮೆರವಣಿಗೆ ಉದ್ಘಾಟನೆ ನಡೆಯಲಿದೆ. ತೆಲಂಗಾಣದ ಜನಪರ ಹೋರಾಟಗಾರ್ತಿ ಡಾಜಿ.ವಿ.ವೆನ್ನೆಲ ಗದ್ದರ್ ಅವರು ಮೆರವಣಿಗೆ ಉದ್ಘಾಟಿಸಿ ಮಾತನಾಡಲಿದ್ದಾರೆ. ಬಳಿಕ ಬಾಸೆಲ್ ಮಿಷನ್ ಚರ್ಚ್‌ನಲ್ಲಿ ಸಾರ್ವಜನಿಕ ಸಭೆ ನಡೆಯಲಿದೆ ಎಂದರು.
ಅಖಿಲಾ, ಜಾನಕಿ ಬ್ರಹ್ಮಾವರ, ಲಿನೆಟ್, ಹೊಮೆರಾ, ವೆರೊನಿಕಾ ಕರ್ನೇಲಿಯೋ ಪತ್ರಿಕಾಗೋಷ್ಠಿಯಲ್ಲಿದ್ದರು.

Latest Indian news

Popular Stories