ಪ್ರಜ್ವಲ್ ರೇವಣ್ಣ’ರ ಮೇ.15 ವಿಮಾನ ಟಿಕೆಟ್ ಕ್ಯಾನ್ಸಲ್

ಬೆಂಗಳೂರು: ಅಶ್ಲೀಲ ವಿಡಿಯೋ ಪ್ರಕರಣ ಸಂಬಂಧ ವಿದೇಶದಲ್ಲಿ ತಲೆಮರೆಸಿಕೊಂಡಿರುವ ಪ್ರಜ್ವಲ್ ರೇವಣ್ಣ ಅವರು ಮೇ. 15 ರಂದು ರಾಜ್ಯಕ್ಕೆ ಆಗಮಿಸುವ ಸಾಧ್ಯತೆ ಇದೆ ಎನ್ನಲಾಗಿತ್ತು. ಆದರೆ ಇದೀಗ ವಿಮಾನ ಟಿಕೆಟ್ ಕ್ಯಾನ್ಸಲ್ ಆಗಿದೆ ಎಂದು ಹೇಳಲಾಗುತ್ತಿದೆ.

ರಾಜ್ಯಕ್ಕೆ ವಾಪಸ್ ಬರಲು ಪ್ರಜ್ವಲ್ ರೇವಣ್ಣ ಅವರು ಲುಪ್ತಾನ್ಸಾ ಫ್ಲೈಟ್ ಟಿಕೆಟ್ ಬುಕ್ ಫ್ರಾಂಕ್ ಫರ್ಟ್ ನಿಂದ ಬೆಂಗಳೂರಿಗೆ ರಿಟರ್ನ್ ಟಿಕೆಟ್ ಬುಕ್ ಮಾಡಿದ್ದರು.

ಆದರೆ ಇದೀಗ ಈ ಟಿಕೆಟ್ ಕ್ಯಾನ್ಸಲ್ ಮಾಡಿದ್ದಾರೆ ಎನ್ನಲಾಗಿದೆ.

ಮೇ.15 ರ ಮಧ್ಯಾಹ್ನ 1.30 ಕ್ಕೆ ಫ್ರಾಂಕ್ ಫರ್ಟ್ ನಿಂದ ವಿಮಾನವು ಹೊರಡಲಿದ್ದು, ರಾತ್ರಿ 1 ಗಂಟೆ ಸುಮಾರಿಗೆ ಬೆಂಗಳೂರಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಲಿದೆ. ಆದರೆ ಈ ವಿಮಾನದ ಟಿಕೆಟ್ ಅನ್ನು ಬುಕ್ ಮಾಡಿದ್ದ ಪ್ರಜ್ವಲ್ ರೇವಣ್ಣ ಅವರು ಟಿಕೆಟ್ ಕ್ಯಾನ್ಸಲ್ ಮಾಡಿದ್ದಾರೆ.

ಅಶ್ಲೀಲ ವಿಡಿಯೋ ಪ್ರಕರಣವನ್ನು ಎಸ್ ಐಟಿಗೆ ನೀಡುವ ಮುನ್ನವೇ ಪ್ರಜ್ವಲ್ ರೇವಣ್ಣ ಅವರು ಜರ್ಮನಿಗೆ ಹೋಗಿದ್ದು,ವಿಚಾರಣೆಗೆ ಹಾಜರಾಗುವಂತೆ ಎಸ್ ಐಟಿ ಅಧಿಕಾರಿಗಳು ನೋಟಿಸ್ ನೀಡಿದ್ದರು. ಆದರೆ ಪ್ರಜ್ವಲ್ ರೇವಣ್ಣ ಜರ್ಮನಿಯಲ್ಲಿರುವ ಕಾರಣ ವಿಚಾರಣೆಗೆ ಒಂದು ವಾರಗಳ ಕಾಲ ಸಮಯ ಕೇಳಿದ್ದರು.

Latest Indian news

Popular Stories