ಬಾಲಕಾರ್ಮಿಕರನ್ನು ನೇಮಿಸಿಕೊಂಡರೆ ೨ ವರ್ಷ ಜೈಲು: ಮಂಜುನಾಥ ರೆಡ್ಡಿ

ರಾಯಚೂರು, ಜು.೧೪, (ಕ.ವಾ):- ಬಾಲ ಕಾರ್ಮಿಕರನ್ನು ಕೆಲಸಕ್ಕೆ ನೇಮಿಸಿಕೊಳ್ಳುವುದು ಹಾಗೂ ದುಡಿಸಿಕೊಳ್ಳುವುದು ಕಾನೂನಿನಡಿ ಅಪರಾಧವಾಗಿದ್ದು, ಉಲ್ಲಂಘಿಸಿದರೆ ದಂಡದ ಜತೆಗೆ ೨ ವರ್ಷ ಜೈಲು ಶಿಕ್ಷೆ ಅನುಭವಿಸಬೇಕಾಗುತ್ತದೆ ಎಂದು ಜಿಲ್ಲಾ ಬಾಲಕಾರ್ಮಿಕ ಯೋಜನಾಧಿಕಾರಿ ಮಂಜುನಾಥ ರೆಡ್ಡಿ ಅವರು ಹೆಳಿದರು.
ಅವರು ಜು.೧೪ ರಂದು ಜಿಲ್ಲೆಯ ಮಸ್ಕಿ ಪಟ್ಟಣದಲ್ಲಿ ಜಿಲ್ಲಾಡಳಿತ, ಕಾರ್ಮಿಕ ಇಲಾಖೆ, ಜಿಲ್ಲಾ ಬಾಲಕಾರ್ಮಿಕ ಯೋಜನೆ, ಶಿಕ್ಷಣ ಇಲಾಖೆ ಮತ್ತು ಮಕ್ಕಳ ಸಹಾಯವಾಣ ಯ ಸಂಯೋಗದಲ್ಲಿ ಹೋಟಲ್, ಬಾರ್&ರೆಸ್ಟೋರೆಂಟ್, ಗ್ಯಾರೇಜ್, ಕಿರಾಣ ಅಂಗಡಿ ಸೇರಿದಂತೆ ಉದ್ದಿಮೆಗಳಲ್ಲಿ ಬಾಲಕಾರ್ಮಿಕ ಹಾಗೂ ಕಿಶೋರಕಾರ್ಮಿಕ ಕಾಯ್ದೆಯಡಿಯಲ್ಲಿ ತಪಾಸಣೆಯನ್ನು ನಡೆಸಿ, ಮಕ್ಕಳನ್ನು ಕೆಲಸಕ್ಕೆ ನೇಮಿಸಿಕೊಳ್ಳದಂತೆ ತಿಳಿವಳಿಕೆ ನೀಡಿ ಸ್ಟೀಕರ್ ಮತ್ತು ಕರಪತ್ರಗಳ ಮುಖಾಂತರ ಜಾಗೃತಿ ಮೂಡಿಸಿ ಅವರು ಮಾತನಾಡಿದರು.

ಜಿಲ್ಲೆಯಲ್ಲಿ ಬಾಲ ಕಾರ್ಮಿಕರನ್ನು ನಿಯೋಜಿಸಿಕೊಳ್ಳದೆ ಬಾಲ ಕಾರ್ಮಿಕ ಮುಕ್ತ ಜಿಲ್ಲೆಯನ್ನಾಗಿಸಲು ಎಲ್ಲರೂ ಕೈಜೋಡಿಸಬೇಕು. ನಿಯಮ ಉಲ್ಲಂಘಿಸಿದರೆ ೬ ತಿಂಗಳಿಗಿAತ ಕಡಿಮೆ ಇಲ್ಲದಂತೆ ಎರಡು ವರ್ಷದವರೆಗೆ ಜೈಲು ಶಿಕ್ಷೆ ಅಥವಾ ₹೨೦,೦೦೦ದಿಂದ ₹೫೦,೦೦೦ದವರೆಗೆ ದಂಡ ವಿಧಿಸಲು ಕಾನೂನಿನಲ್ಲಿ ಅವಕಾಶವಿದೆ ಎಂದು ಎಚ್ಚರಿಕೆ ನೀಡಿದರು.

ಇದೇ ಸಂದರ್ಭದಲ್ಲಿ ಶಿಕ್ಷಣ ಇಲಾಖೆಯ ಅಧಿಕಾರಿ ಚನ್ನಬಸವ, ಮಕ್ಕಳ ಸಹಾಯವಾಣ ಪ್ರೋಗ್ರಾಮ್ ಮ್ಯಾನೇಜರ್ ರವಿಕುಮಾರ್, ನಾಗರಾಜ್, ಶಾಮಣ್ಣ ಸೇರಿದಂತೆ ಇತರರು ಇದ್ದರು.

Latest Indian news

Popular Stories