ಕಲ್ಲು ನಾಗರಕ್ಕೆ ಹಾಲು ಎರೆಯುವ ಬದಲು ಮಕ್ಕಳಿಗೆ ಹಾಲು ವಿತರಿಸಿ – ರವಿ ಪಾಟೀಲ್

ರಾಯಚೂರು ಆ ೨೧ : ಮಾನವ ಬಂಧುತ್ವ ವೇದಿಕೆ ಹಾಗೂ ರವಿ ಪಾಟೀಲ್ ಫೌಂಡೇಶನ್ ರಾಯಚೂರು ವತಿಯಿಂದ ನಗರ ಮತ್ತು ಗ್ರಾಮೀಣ ಭಾಗದ ವಿವಿಧ ಕಡೆಗಳಲ್ಲಿ ಸೋಮವಾರ ದಂದು ನಾಗರ ಪಂಚಮಿ ಬದಲಾಗಿ ವೈಜ್ಞಾನಿಕ, ವೈಚಾರಿಕ ಚಿಂತನೆ ಬಿತ್ತುವ ಮೂಲಕ ಬಸವ ಪಂಚಮಿ ಆಚರಿಸಲಾಯಿತು.

ಪ್ರತೀ ವರ್ಷ ರಾಜ್ಯದಲ್ಲಿ 40 ಲಕ್ಷ ಮಕ್ಕಳು ಅಪೌಷ್ಟಿಕತೆಯಿಂದ ಬಳಲುತಿದ್ದಾರೆ ಆದರಿಂದ
ನಾಗರ ಪಂಚಮಿ ನೆಪದಲ್ಲಿ ಕಲ್ಲುನಾಗರಕ್ಕೆ ಪೌಷ್ಠಿಕ ಆಹಾರವಾದ ಹಾಲು ಹುತ್ತಕ್ಕೆ ಹಾಕಿ ವ್ಯರ್ಥ ಮಾಡುವ ಬದಲು ಜನರಲ್ಲಿ ಬಿತ್ತಿದ ಮೌಢ್ಯವನ್ನು
ತೊಲಗಿಸಲು ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಮಕ್ಕಳಿಗೆ ಹಾಲು ವಿತರಿಸುವ ಮೂಲಕ
ಬಸವ ಪಂಚಮಿ ಹಬ್ಬವನ್ನು ತಾಲ್ಲೂಕಿನ ಪದ್ಮಾವತಿ ನಗರ, ಅಂಬೇಡ್ಕರ್ ನಗರ, ಉರುಕುಂದ ಈರಣ್ಣ ಕಾಲೋನಿ, ಗ್ರಾಮಾಂತರದ ಮಂಡಲಗೇರಾ ಗ್ರಾಮದಲ್ಲಿ ಆಚರಿಸಲಾಯಿತು.

ರವಿ ಪಾಟೀಲ್ ಫೌಂಡೇಶನ್ ಅಧ್ಯಕ್ಷರಾದ ರವಿ ಪಾಟೀಲ್ ಮಾತನಾಡುತ್ತಾ.. ಅಪೌಷ್ಟಿಕತೆಯಿಂದ ಬಳಲುತ್ತಿರುವ ಮಕ್ಕಳಿಗೆ ಹಾಲು ವಿತರಿಸುವುದರಿಂದ ಜನರಲ್ಲಿ ವೈಚಾರಿಕತೆ ಬಿತ್ತಬೇಕು. ಕಲ್ಲು ನಾಗರಕ್ಕೆ ಹಾಲು ವಿತರಿಸುವುದರಿಂದ ಹಾವು ಹಾಲನ್ನು ಕುಡಿಯುವುದಿಲ್ಲ ಈ ರೀತಿಯ ಮೌಲ್ಯವನ್ನು ಜನರಲ್ಲಿ ತೊಲಗಿಸಿ ವೈಜ್ಞಾನಿಕ ವೈಚಾರಿಕತೆಯನ್ನು ಬಿತ್ತಬೇಕು ಅ ನಿಟ್ಟಿನಲ್ಲಿ ಬಸವಣ್ಣ ನವರ ಲಿಂಗೈಕ್ಯರಾದ ದಿನದಂದು ಬಸವ ಪಂಚಮಿ ಮೂಲಕ ಮಕ್ಕಳಿಗೆ ಹಾಲು ವಿತರಿಸಲಾಗುವುದು ಎಂದು ತಿಳಿಸಿದರು.

ಸಾಮಾಜಿಕ ಕಾರ್ಯಕರ್ತರಾದ ಲಕ್ಷ್ಮಣ್ ಮಂಡಲಗೇರಾ ಮಾತನಾಡುತ್ತಾ ” ಪಂಚಮಿ ಹಬ್ಬವನ್ನು ನಾಗರ ಹಾವಿಗೆ ತಳಕು ಹಾಕಿ ಸಾಂಪ್ರದಾಯವಾದಿಗಳು, ಪುರೋಹಿತಶಾಹಿಗಳು ಈ ಹಬ್ಬದ ನೈಜ ಆಚರಣೆಗಳ ಮಹತ್ವವನ್ನು ಮರೆಮಾಚಿ ಕೇವಲ ಅಮೂಲ್ಯವಾದ ಹಾಲನ್ನು ಕಲ್ಲಿನ ನಾಗರ ಮೂರ್ತಿಗೆ ಎರೆಯುವ ಪರಮ ಮೌಢ್ಯವನ್ನು ಈ ಹಬ್ಬದಲ್ಲಿ ತುರುಕಲಾಗಿದೆ ನಾಗರಕ್ಕೆ ಹಾಲೆರೆಯದಿದ್ದರೆ ಹಾವಿಗೆ ಕೋಪ ಬರುತ್ತದೆˌ ನಾಗದೋಷ ಕಾಡುತ್ತದೆ ಎಂದು ಜನರ ಮನಸ್ಸಲ್ಲಿ ಮೌಢ್ಯವನ್ನು ತುಂಬಿದ್ದಾರೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ರಾಜಶೇಖರ ಪಾಟೀಲ್ ಮನ್ಸಲಾಪೂರ, ಶರಣು ಸಾಹುಕಾರ, ಲಕ್ಷ್ಮಣ್ ದಾಸರಿ, ಲಕ್ಷ್ಮಣ್ ಮಂಡಲಗೇರಾ, ಮಂಜುನಾಥ, ರಾಜು ಗ್ರಾ.ಪಂ.ಸದಸ್ಯರು ಮಂಡಲಗೇರಾ, ಜಂಬಪ್ಪ , ರಘುಪತಿ, ಮುನಿಯಪ್ಪ ಇನ್ನಿತರರು ಇದ್ದರು..

Latest Indian news

Popular Stories