ರುತುರಾಜ್‌ ಶತಕ ವ್ಯರ್ಥ, ಭಾರತದ ವಿರುದ್ಧ ಆಸೀಸ್‌ಗೆ ರೋಚಕ ಗೆಲುವು

ಇಂದು ನಡೆದ ಭಾರತ ಮತ್ತು ಆಸ್ಟ್ರೇಲಿಯಾ (IND vs AUS) ನಡುವಿನ ಮೂರನೇ ಟಿ20 ಅಂತಾರಾಷ್ಟ್ರೀಯ ಪಂದ್ಯದಲ್ಲಿ ಆಸೀಸ್‌‌ ರೋಚಕ ಗೆಲುವು ದಾಖಲಿಸಿತು.

ಟಾಸ್‌ ಗೆದ್ದ ಆಸ್ಟ್ರೇಲಿಯಾ ತಂಡದ ನಾಯಕ ಮ್ಯಾಥ್ಯೂ ಹೆಡ್‌ ಮೊದಲು ಬೌಲಿಂಗ್‌ ಆಯ್ಕೆ ಮಾಡಿದರು. ಈ ಮೂಲಕ ಬ್ಯಾಟಿಂಗ್‌ ಆರಂಭಿಸಿದ ಭಾರತ ತಂಡದ ಪರ ರುತುರಾಜ್‌ ಗಾಯಕ್ವಾಡ (Ruturaj Gaikwad) ಭರ್ಜರಿ ಶತಕ ಸಿಡಿಸುವ ಮೂಲಕ ತಂಡದ ಮೊತ್ತ ಹೆಚ್ಚಿಸಲು ಸಹಾಯಕರಾದರು. ಅಂತಿಮವಾಗಿ ಭಾರತ ತಂಡ 20 ಓವರ್‌ಗೆ 3 ವಿಕೆಟ್ ನಷ್ಟಕ್ಕೆ 222 ರನ್‌ ಗಳಿಸುವ ಮೂಲಕ ಆಸೀಸ್‌ಗೆ 223 ರನ್‌ ಗಳ ಬೃಹತ್‌ ಟಾರ್ಗೆಟ್‌‌ ನೀಡಿತು.

ಈ ಮೊತ್ತ ಬೆನ್ನತ್ತಿದ ಆಸ್ಟ್ರೇಲಿಯಾ ತಂಡ 20 ಓವರ್‌ಗೆ 5 ವಿಕೆಟ್‌‌ ನಷ್ಟಕ್ಕೆ 225 ರನ್‌ ಗಳಿಸುವ ಮೂಲಕ 5 ವಿಕೆಟ್‌ಗಳ ರೋಚಕ ಗೆಲುವು ದಾಖಲಿಸಿತು. ಈ ಮೂಲಕ 5 ಪಂದ್ಯಗಳ ಸರಣಿಯಲ್ಲಿ ಭಾರತ ತಂಡ 2-1ರ ಅಂತರದಿಂದ ಮುನ್ನಡೆ ಸಾಧಿಸಿದ್ದು, ಆಸ್ಟ್ರೇಲಿಯಾ ಸರಣಿ ಆಸೆ ಜೀವಂತವಾಗಿ ಉಳಿದಿದೆ.

ಇನ್ನು, ಭಾರತ ನೀಡಿದ 223 ರನ್‌ಗಳ ಗುರಿ ಬೆನ್ನಟ್ಟಿದ ಆಸ್ಟ್ರೇಲಿಯಕ್ಕೆ ಟ್ರಾವಿಸ್ ಹೆಡ್ 35(18) ಮತ್ತು ಆರೋನ್ ಹಾರ್ಡಿ 16(12) ಅಮೋಘ ಆರಂಭ ನೀಡಿದರು. ಇವರಿಬ್ಬರು 47 ರನ್ ಸೇರಿಸಿದರು. ಆದರೆ, ಇದಾದ ಬಳಿಕ ಆಸ್ಟ್ರೇಲಿಯಾ 67 ರನ್ ಗಳಿಸುವಷ್ಟರಲ್ಲಿ 3 ವಿಕೆಟ್ ಕಳೆದುಕೊಂಡಿತು. ಜೋಶ್ ಇಂಗ್ಲಿಷ್ 10 ರನ್ ಗಳಿಸಿ ಔಟಾದರೆ ಮಾರ್ಕಸ್ ಸ್ಟೊಯಿನಿಸ್ ಕೇವಲ 17 ರನ್ ಗಳಿಸಲಷ್ಟೇ ಶಕ್ತರಾದರು. ಗ್ಲೆನ್ ಮ್ಯಾಕ್ಸ್‌ವೆಲ್ ಒಂದು ತುದಿಯಲ್ಲಿ ಬಹಳ ಹೊತ್ತು ನಿಂತು ಭರ್ಜರಿ ಬ್ಯಾಟಿಂಗ್‌ ಮಾಡಿದರು. ಅಲ್ಲದೇ ಕೊನೆಯವರೆಗೆ ನಿಂತು ಶತಕದ ಜೊತೆ ತಂಡವನ್ನು ಗೆಲುವಿನ ದಡ ಸೇರಿಸಿದರು.

ಗ್ಲೆನ್ ಮ್ಯಾಕ್ಸ್‌ವೆಲ್ (48 ಎಸೆತಗಳಲ್ಲಿ ಔಟಾಗದೆ 104; 8 ಬೌಂಡರಿ, 8 ಸಿಕ್ಸರ್) ಜಗತ್ತನ್ನು ಸೋಲಿಸಿದರು. ಸೂಪರ್ ಶತಕದ ಮೂಲಕ ಆಸ್ಟ್ರೇಲಿಯಾಕ್ಕೆ ಜಯ ತಂದುಕೊಟ್ಟರು. ಟೀಂ ಇಂಡಿಯಾದ ಬೌಲರ್‌ಗಳಲ್ಲಿ ರವಿ ಬಿಷ್ಣೋಯ್ 2 ವಿಕೆಟ್ ಪಡೆದರೆ ಅಕ್ಷರ್ ಪಟೇಲ್, ಅವೇಶ್ ಖಾನ್ ಮತ್ತು ಅರ್ಶ್ ದೀಪ್ ಸಿಂಗ್ ತಲಾ ಒಂದು ವಿಕೆಟ್ ಪಡೆದರು.

Latest Indian news

Popular Stories