Sports

ಡೇನಿಯಲ್‌ಗೆ ಕೊರೊನಾ

ಚೆನ್ನೈ : ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡದ ಆಲ್‌ರೌಂಡರ್ ಡೇನಿಯಲ್ ಸ್ಯಾಮ್ಸ್ ಅವರಿಗೆ ಕರೊನಾ ಸೋಂಕು ತಗುಲಿದೆ. ಏಸಿಂಪ್ಟಮಾಟಿಕ್ ಆಗಿರುವ ಸ್ಯಾಮ್ಸ್ ಅವರನ್ನು ನಿಗದಿತ ವೈದ್ಯಕೀಯ ಕೇಂದ್ರದಲ್ಲಿ ಐಸೋಲೇಷನ್‌ನಲ್ಲಿರಿಸಲಾಗಿದೆ ಎಂದು ಆರ್‌ಸಿಬಿ ಅಧಿಕೃತ ಹೇಳಿಕೆ ನೀಡಿದೆ.
ಐಪಿಲ್ 2021 ಪಂದ್ಯಾವಳಿಯಲ್ಲಿ ಭಾಗವಹಿಸಲು ಸಾಮ್ಸ್ ಅವರು, ಚೆನ್ನೈನ ಹೊಟೆಲ್‌ಗೆ ಏಪ್ರಿಲ್ 3 ರಂದು ಕರೊನಾ ನೆಗೆಟೀವ್ ವರದಿಯೊಂದಿಗೆ ಆಗಮಿಸಿದ್ದರು. ಇಂದು ಮಾಡಿದ ಎರಡನೇ ಪರೀಕ್ಷೆಯಲ್ಲಿ ಅವರಿಗೆ ಪಾಸಿಟೀವ್ ಬಂದಿದೆ ಎಂದು ಆರ್‌ಸಿಬಿ ತಿಳಿಸಿದೆ.
ಈ ಮುನ್ನ ಆರ್‌ಸಿಬಿಯ ಮತ್ತೊಬ್ಬ ಆಟಗಾರ ದೇವದತ್ ಪಡಿಕ್ಕಲ್ ಅವರಿಗೆ ಹೊಟೆಲ್ ಕ್ವಾರಂಟೈನ್ ಸಮಯದಲ್ಲಿ ಕರೊನಾ ಪಾಸಿಟೀವ್ ಬಂದಿತ್ತು. 14ನೇ ಆವೃತ್ತಿಯ ಐಪಿಎಲ್ ಪಂದ್ಯಾವಳಿಯ ಆರಂಭಿಕ ಪಂದ್ಯದಲ್ಲಿ ಆರ್‌ಸಿಬಿ, ಏಪ್ರಿಲ್ 9 ರಂದು ಮುಂಬೈ ಇಂಡಿಯನ್ಸ್ ವಿರುದ್ಧ ಸೆಣೆಸಲಿದೆ. 14ನೇ ಆವೃತ್ತಿಯ ಐಪಿಎಲ್ ಪಂದ್ಯಾವಳಿಯ ಆರಂಭಿಕ ಪಂದ್ಯದಲ್ಲಿ ಆರ್‌ಸಿಬಿ, ಏಪ್ರಿಲ್ 9 ರಂದು ಮುಂಬೈ ಇಂಡಿಯನ್ಸ್ ವಿರುದ್ಧ ಸೆಣೆಸಲಿದೆ. ಆ ಪಂದ್ಯದಲ್ಲಿ ಡೇನಿಯಲ್ ಸ್ಯಾಮ್ಸ್ ಮತ್ತು ದೇವದತ್ ಪಡಿಕ್ಕಲ್ ಅವರು ಆಡಲು ಸಾಧ್ಯವಾಗುವುದಿಲ್ಲ ಎನ್ನಲಾಗಿದೆ.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Back to top button