ನಮಗೂ ಐಪಿಎಲ್ ನಲ್ಲಿ ಆಡುವ ಆಸೆ ಇದೆ: ಹಸನ್ ಅಲಿ

ಇಂಡಿಯನ್ ಪ್ರೀಮಿಯರ್ ಲೀಗ್ ಬಗ್ಗೆ ಪಾಕಿಸ್ತಾನದ ಅನುಭವಿ ವೇಗದ ಬೌಲರ್ ಹಸನ್ ಅಲಿ ದೊಡ್ಡ ಹೇಳಿಕೆ ನೀಡಿದ್ದಾರೆ. ವಾಸ್ತವವಾಗಿ, ಹಸನ್ ಅಲಿ ಐಪಿಎಲ್ ಆಡಲು ಬಯಸುವ ಲಕ್ಷಾಂತರ ಆಟಗಾರರಲ್ಲಿ ತಾನೂ ಒಬ್ಬ ಎಂದು ಹೇಳಿಕೊಂಡಿದ್ದಾರೆ.

ಆದರೆ ಪಾಕಿಸ್ತಾನಿ ಎಂಬ ಕಾರಣಕ್ಕೆ ಹಾಗೆ ಮಾಡಲು ಸಾಧ್ಯವಾಗುತ್ತಿಲ್ಲ. ಹಸನ್ ಅಲಿ ಪಾಕಿಸ್ತಾನಿ ಸುದ್ದಿ ವಾಹಿನಿ ಸಾಮಾ ಟಿವಿಯೊಂದಿಗೆ ಮಾತನಾಡುವಾಗ ತಮ್ಮ ಮನದಿಂಗಿತವನ್ನು ವ್ಯಕ್ತಪಡಿಸಿದ್ದಾರೆ.

ನಿಮಗೆ ಐಪಿಎಲ್‌ನಲ್ಲಿ ಆಡಲು ಆಫರ್ ಬಂದರೆ ಅಲ್ಲಿ ಆಡಲು ಇಷ್ಟಪಡುತ್ತೀರಾ ಎಂದು ಹಸನ್ ಅಲಿ ಅವರನ್ನು ಕೇಳಲಾಯಿತು. ಈ ಪ್ರಶ್ನೆಯನ್ನು ಕೇಳಿದ ಹಸನ್ ಒಂದು ಸೆಕೆಂಡ್ ಕೂಡ ವ್ಯರ್ಥ ಮಾಡದೆ, ‘ಇದು ಒಳ್ಳೆಯ ಪ್ರಶ್ನೆ. ನೋಡಿ ಐಪಿಎಲ್ ಒಂದು ದೊಡ್ಡ ಟೂರ್ನಿ. ಅವರಲ್ಲಿ ಸಾಕಷ್ಟು ಅವಕಾಶ ಮತ್ತು ಹಣವಿದೆ. ಪ್ರತಿಯೊಬ್ಬ ಆಟಗಾರನೂ ಐಪಿಎಲ್ ಆಡಲು ಬಯಸುತ್ತಾನೆ ಎಂದರು.

ಪಾಕಿಸ್ತಾನದ ಆಟಗಾರನು ತನ್ನ ಮನದಾಳವನ್ನು ಮುಂದಿಟ್ಟಿದ್ದಾರೆ. ಪ್ರತಿಯೊಬ್ಬ ಆಟಗಾರನು ಐಪಿಎಲ್ ಆಡಲು ಬಯಸುತ್ತಾನೆ ಎಂದು ಹೇಳಿದರು. ಆದರೆ ನಾವು ಆಡಲು ಸಾಧ್ಯವಿಲ್ಲ. ಇದು ಎಲ್ಲರಿಗೂ ತಿಳಿದಿರುವ ಕಾರಣ ನಾನು ಇದರ ಕಾರಣವನ್ನು ಹೇಳಲು ಇಷ್ಟಪಡುವುದಿಲ್ಲ. ಹೌದು, ನನಗೆ ಅವಕಾಶ ಸಿಕ್ಕರೆ, ನಾನು ಖಂಡಿತವಾಗಿಯೂ ಐಪಿಎಲ್ ಆಡಲು ಬಯಸುತ್ತೇನೆ.

ಹಸನ್ ಅಲಿ ಐಪಿಎಲ್ ಆಡುವ ಬಯಕೆಯನ್ನು ವ್ಯಕ್ತಪಡಿಸಿದ ಮೊದಲ ಪಾಕಿಸ್ತಾನಿ ಆಟಗಾರನಲ್ಲ. ಇದಕ್ಕೂ ಮೊದಲು, ಪಾಕಿಸ್ತಾನದ ಅನೇಕ ಆಟಗಾರರು ಇದನ್ನು ಮಾಡಿದ್ದಾರೆ. ಆದರೆ ಭಾರತ ಮತ್ತು ಪಾಕಿಸ್ತಾನ ನಡುವಿನ ರಾಜತಾಂತ್ರಿಕ ಬಿಕ್ಕಟ್ಟಿನಿಂದಾಗಿ ಬಿಸಿಸಿಐ ಪಾಕಿಸ್ತಾನದ ಆಟಗಾರರನ್ನು ಐಪಿಎಲ್ ಆಡದಂತೆ ನಿಷೇಧಿಸಿದೆ.

Latest Indian news

Popular Stories