ಐಪಿಎಲ್ 17ನೇ ಸೀಸನ್‌: ವರ್ಣರಂಜಿತ ಚಾಲನೆ

ಕ್ರಿಕೆಟ್ ಪ್ರೇಮಿಗಳು ಬಹುದಿನಗಳಿಂದ ಕಾಯುತ್ತಿದ್ದ ಕ್ಷಣ ಕೊನೆಗೂ ಬಂದಿದೆ. ಐಪಿಎಲ್ 17ನೇ ಸೀಸನ್ ಇಂದಿನಿಂದ ಆರಂಭವಾಗಿದೆ. ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ತಂಡ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಸೆಣಸಲಿದೆ.

ಐಪಿಎಲ್ 17ನೇ ಸೀಸನ್‌ಗೂ ಮುನ್ನ ವರ್ಣರಂಜಿತ ಕಾರ್ಯಕ್ರಮ ಅದ್ದೂರಿಯಾಗಿ ನಡೆಯಿತು. ಆ ನಂತರ ಅಕ್ಷಯ್ ಕುಮಾರ್, ಟೈಗರ್ ಶ್ರಾಫ್, ಸೋನು ನಿಗಮ್, ಎಆರ್ ರೆಹಮಾನ್, ಬಿಸಿಸಿಐ ಅಧ್ಯಕ್ಷ ರೋಜರ್ ಬಿನ್ನಿ, ಕಾರ್ಯದರ್ಶಿ ಜಯ್ ಶಾ, ಅರುಣ್ ಧುಮಾಲ್, ರಾಜೀವ್ ಶುಕ್ಲಾ, ಆರ್‌ಸಿಬಿ ಕ್ಯಾಪ್ಟನ್ ಫಾಫ್ ಡು ಪ್ಲೆಸಿಸ್ ವೇದಿಕೆಯಲ್ಲಿ ಜಮಾಯಿಸಿದರು. ಅಂತಿಮವಾಗಿ, ಸಿಎಸ್‌ಕೆ ಪರ ಹೊಸದಾಗಿ ಆಯ್ಕೆಯಾದ ನಾಯಕ ರುತುರಾಜ್ ಗಾಯಕ್ವಾಡ್ ಐಪಿಎಲ್ ಟ್ರೋಫಿಯನ್ನು ವೇದಿಕೆಯ ಮೇಲಿರಿಸಿದರು. ಆ ಬಳಿಕ ಪಟಾಕಿ ಸಿಡಿಸುವ ಮೂಲಕ ಉದ್ಘಾಟನಾ ಸಮಾರಂಭಕ್ಕೆ ಅಂತ್ಯ ಹಾಡಲಾಯಿತು.

Latest Indian news

Popular Stories