ವಿಶ್ವದ ನಂಬರ್ ಒನ್ ಬ್ಯಾಟ್ಸ್’ಮೆನ್ ಸ್ಥಾನದತ್ತ ಶುಭಮನ್’ಗಿಲ್: ಇದೇ ರೀತಿ ಬ್ಯಾಟಿಂಗ್ ಮುಂದುವರಿದರೆ ಬಾಬರ್ ಅಝಮ್ ಹಿಂದಕ್ಕೆ!

ವಿಶ್ವದ ನಂಬರ್ ಒನ್ ಬ್ಯಾಟರ್’ಆಗಿ ಪಾಕಿಸ್ತಾನದ ಬಾಬಾರ್ ಅಝಾಮ್ ಮುಂದುವರಿದಿದ್ದು ಅವರನ್ನು ಹಿಂದಿಕ್ಕಲು ಶುಭಮನ್’ಗಿಲ್ ತಯಾರಾಗಿದ್ದಾರೆ.

2023 ರಲ್ಲಿ 1000 ಕ್ಕೂ ಅಧಿಕ ರನ್ ಗಳಿಸಿದ ಏಕೈಕ ಬ್ಯಾಟ್ಸ್’ಮೆನ್ ಗಿಲ್ಲ. ಇದೇ ರೀತಿಯ ನಿರ್ವಹಣೆ ಮುಂದುವರಿಸಿದರೆ ಬಾಬಾರ್ ಅಝಮ್ ರನ್ನು ಶೀಘ್ರ ಹಿಂದಿಕ್ಕಲಿದ್ದಾರೆ. ಗಿಲ್ 814 ಅಂಕ ಹೊಂದಿದ್ದರೆ ಬಾಬಾರ್ 857 ಅಂಕಗಳೊಂದಿಗೆ ಏಕದಿನ ಕ್ರಿಕೆಟ್ ನಲ್ಲಿ ವಿಶ್ವದ ಅಗ್ರಸ್ಥಾನೀಯ ಬ್ಯಾಟ್ಸ್ ಮೆನ್ ಎನಿಸಿದ್ದಾರೆ.

ಗಿಲ್ 5 ಶತಕ ಮತ್ತು 5 ಅರ್ಧ ಶತಕಗೊಳೊಂದಿಗೆ 20 ಪಂದ್ಯದಲ್ಲಿ 1230 ರನ್ ಗಳಿಸಿದ್ದಾರೆ. ಈ ಮೂಲಕ ಈ ಮುಂಚೆ ಶಿಖರ್ ಧವನ್ ಅವರ ಹೆಸರಿನಲ್ಲಿದ್ದ ಸಾಧನೆ ಮುರಿದಿದ್ದಾರೆ‌.

Latest Indian news

Popular Stories