ಒಡಿಶಾ: ಕೊಳವೆ ಬಾವಿಯಲ್ಲಿ ನವಜಾತ ಶಿಶು ಪತ್ತೆ

ಓಡಿಶಾ : 15-20 ಅಡಿ ಆಳದ ಕೊಳವೆ ಬಾವಿಯಲ್ಲಿ ಮಗು ಸಿಕ್ಕಿಹಾಕಿಕೊಂಡ ಘಟನೆ ಒಡಿಶಾದ ಸಂಬಲ್‌ಪುರ ಜಿಲ್ಲೆಯಲ್ಲಿ ನಡೆದಿದೆ. ಇದೀಗ ಐದು ಗಂಟೆಗಳ ಕಾಲ ನಡೆದ ರಕ್ಷಣಾ ಕಾರ್ಯಾಚರಣೆಯ ನಂತರ ರಕ್ಷಿಸಲಾಗಿದೆ. ಮಗುವನ್ನು ಅಗತ್ಯ ವೈದ್ಯಕೀಯ ಚಿಕಿತ್ಸೆಗಾಗಿ ಆಸ್ಪತ್ರೆಗೆ ರವಾನಿಸಲಾಗಿದೆ
ಒಡಿಶಾ ವಿಶೇಷ ಪರಿಹಾರ ಆಯುಕ್ತರು ತಕ್ಷಣವೇ ರೆಂಗಾಲಿಯಿಂದ ಅಗ್ನಿಶಾಮಕ ಸೇವೆಗಳ ಸಿಬ್ಬಂದಿಯನ್ನು ಝಾರ್ಸುಗುಡಾದಲ್ಲಿ ಒಡಿಶಾ ವಿಪತ್ತು ಕ್ಷಿಪ್ರ ಕಾರ್ಯಾಚರಣೆ ಪಡೆಯ ತಂಡದೊಂದಿಗೆ ಸ್ಥಳಕ್ಕೆ ಕಳುಹಿಸಿದ್ದಾರೆ.
ಮಗುವಿನ ಅಳುವಿಗೆ ಸ್ಪಂದಿಸಿದ ಸ್ಥಳೀಯರು ಬೋರ್ ವೆಲ್‌ನಲ್ಲಿ ಮಗು ಸಿಕ್ಕಿ ಬಿದ್ದಿರುವುದನ್ನು ಪತ್ತೆ ಹಚ್ಚಿದಾಗ ಘಟನೆ ಬೆಳಕಿಗೆ ಬಂದಿದೆ. ಈ ಬೋರ್ ವೆಲ್ ಗ್ರಾಮದ ಸಮೀಪದ ಅರಣ್ಯದಲ್ಲಿದೆ.
ಘಟನೆಗೆ ಕಾರಣವಾದ ಸಂದರ್ಭಗಳು ಅಸ್ಪಷ್ಟವಾಗಿದ್ದು, ಮಗು ಹೇಗೆ ಬಾವಿಗೆ ಬಿದ್ದಿತು ಎಂಬುದು ತಿಳಿದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮಗುವನ್ನು ಉದ್ದೇಶಪೂರ್ವಕವಾಗಿ ಕೊಳವೆ ಬಾವಿಯಲ್ಲಿ ಬಿಟ್ಟು ಹೋಗಿರುವ ಸಾಧ್ಯತೆ ಇದೆ ಎಂದು ಸ್ಥಳೀಯರು ಶಂಕಿಸಿದ್ದಾರೆ.