ವಿಜಯಪುರ: ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ವಿರುದ್ಧ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಬಿ. ಪಾಟೀಲ ಗುಡುಗಿದ್ದು, ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಶಾಸಕ ಯತ್ನಾಳ ಮಾಡಿರುವ ಭ್ರಷ್ಟಾಚಾರದ ಆರೋಪ ಹುರುಳಿಲ್ಲದ್ದು, ಈ ಹಿಂದೆ ಯತ್ನಾಳ ತಮ್ಮದೇ ಪಕ್ಷದ ಸಿಎಂ ಮೇಲೆ ಮಾಡಿರುವ ಆಪಾದನೆಯ ವಿಡಿಯೋ ನನ್ನ ಬಳಿ ಇದೆ. ಬೇಕಾದರೆ ಬಿಡುಗಡೆ ಮಾಡಲೇ ಎಂದು ಸವಾಲು ಹಾಕಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಂದಿನ ಆರು ತಿಂಗಳಲ್ಲಿ ಕಾಂಗ್ರೆಸ್ ಸರ್ಕಾರ ಪತನವಾಗಲಿದೆ ಎಂದಿರುವ ಯತ್ನಾಳ ಹೇಳಿಕೆಗೆ ಸಂಬAಧಿಸಿದAತೆ ಪ್ರತಿಕ್ರಿಯೆ ನೀಡಿದ ಅವರು, ರಾಜ್ಯದ ಜನ ಕಾಂಗ್ರೆಸ್ ಮೇಲೆ ನಂಬಿಕೆ ಇರಿಸಿ ಬಹುಮತ ನೀಡಿದ್ದಾರೆ. 136ಸ್ಥಾನಗಳಲ್ಲಿ ಕಾಂಗ್ರೆಸ್ ಗೆಲ್ಲಿಸಿದ್ದಾರೆ. ಹೀಗಾಗಿ ಸರ್ಕಾರ ಬೀಳಿಸುವುದು ಯತ್ನಾಳರ ಕೈಯಲ್ಲಿಲ್ಲ. ಇದೊಂದು ಬಾಲಿಷದಿಂದ ಕೂಡಿದ ಹೇಳಿಕೆ ಎಂದರು.
ಈ ಹಿಂದೆ ಇದೇ ಯತ್ನಾಳರು ತಮ್ಮದೇ ಪಕ್ಷದ ಸಿಎಂ ಬಿ.ಎಸ್. ಯಡಿಯೂರಪ್ಪ ಹಾಗೂ ಅವರ ಪುತ್ರ ವಿಜಯೇಂದ್ರ 10 ಸಾವಿರ ಕೋಟಿ ರೂಪಾಯಿ ಭ್ರಷ್ಟಾಚಾರ ಮಾಡಿದ್ದಾರೆಂದು ಆಪಾದಿಸಿದ್ದರು. ಆ ವಿಡಿಯೋ ಇನ್ನೂ ಇದೆ. ಬಿಡುಗಡೆ ಮಾಡಲು ಅದೇನು ರಹಸ್ಯ ವಿಷಯವೇನಲ್ಲ. ಬಹಿರಂಗವಾಗಿಯೇ ಹೇಳಿದ್ದು, ನಾಡಿನ ಜನತೆಗೆಲ್ಲ ಗೊತ್ತಿದೆ ಎಂದರು.
ವಿಜಯಪುರ ಮಹಾನಗರ ಪಾಲಿಕೆ ಆಯುಕ್ತರ ಬದಲಾವಣೆಗೆ ಸಂಬAಧಿಸಿದAತೆ ಮಾತನಾಡಿರುವ ಯತ್ನಾಳ ಈ ಹಿಂದಿನ ಆಯುಕ್ತ ವಿಜಯಕುಮಾರ ಮೆಕ್ಕಳಕಿ ಅವರನ್ನೇ ಮುಂದುವರಿಸಲು ಸಿಎಂಗೆ ಪತ್ರ ಬರೆದಿದ್ದರು. ಕಾರಣ ಈಗಿರುವ ಆಯುಕ್ತ ಸೌದಾಗರ ಲೋವರ್ ಕೇಡರ್ ಆಗಿದ್ದು, ಅರ್ಹರಲ್ಲ ಎಂದಿದ್ದರು. ಆದರೆ, ವಿಜಯಕುಮಾರ ಮೆಕ್ಕಳಕಿ ಕೂಡ ಲೋವರ್ ಕೇಡರ್ ಎಂಬುದು ಯತ್ನಾಳರಿಗೆ ಅರಿವಿರಬೇಕು. ಇಬ್ಬರೂ ಒಂದೇ ಕೇಡರ್ ಆಗಿದ್ದಾರೆ. ಬಹುಶಃ ಯತ್ನಾಳರಿಗೆ ಅವರಿಗೆ ಅರಿವು ಮರೆವು ಇರಬೇಕು ಎಂದು ಎಂ.ಬಿ. ಪಾಟೀಲ ಕಿಚಾಯಿಸಿದರು.
ಇಂಚಗೇರಿ, ಗುಂದವಾನ, ಜಿಗಜಿಣಗಿ ಕೆರೆ ಮತ್ತಿತರ ಕೆರೆ ತುಂಬಲಾಗುವುದು. ಪೀರಾಪುರ ಬೂದಿಹಾಳ ಏತ ನೀರಾವರಿ ನಾನೇ ಆರಂಭಿಸಿದ್ದೆ, ರೇವಣಸಿದ್ದೇಶ್ವರ ಏತ ನೀರಾವರಿ ಯೋಜನೆ ಪೂರ್ಣಗೊಳಿಸಲಾಗುವುದು. ಹೂವಿನಹಿಪ್ಪರಗಿ, ದಿಂಡವಾರ ಮತ್ತಿತರ ಶಾಖಾ ಕಾಲುವೆ ಜಾಲ ಪೂರ್ಣಗೊಳಿಸುವ ನಿಟ್ಟಿನಲ್ಲಿಯೂ ಕ್ರಮ ವಹಿಸಲಾಗುವುದು ಎಂದರು.
ಇಂಡಿ ತಾಲೂಕಿನ ಕೆರೆಗಳು ತುಂಬಿದರೆ ಜಿಲ್ಲೆ ಸಮಗ್ರ ನೀರಾವರಿಯಾಗಲಿದ್ದು ಕುಡಿಯುವ ನೀರಿಗೆ ಹಾಹಾಕಾರಕ್ಕೆ ಶಾಶ್ವತ ಬ್ರೇಕ್ ಬೀಳಲಿದೆ ಎಂದು ಆಶಯ ವ್ಯಕ್ತಪಡಿಸಿದರು.