ಮೈಸೂರು: ಹೊಂದಾಣಿಕೆ ರಾಜಕಾರಣ ಮಾಡುವ ಅವಶ್ಯಕತೆ ಇಲ್ಲ ಎಂದು ಹಿಂದಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Ex CM Basavaraj Bommai) ಹೇಳಿಕೆಗೆ ಸಂಸದ ಪ್ರತಾಪ್ ಸಿಂಹ (Mysore MP Pratap Simha) ಪರೋಕ್ಷವಾಗಿ ವಾಗ್ದಾಳಿ ನಡೆಸಿದ್ದಾರೆ.
ಬಿ.ಎಸ್.ಯಡಿಯೂರಪ್ಪ ತುಂಬಾ ಪ್ರಯತ್ನ ಮಾಡಿ ಸರ್ಕಾರ ತಂದರು. ಬಿ.ಎಸ್.ಯಡಿಯೂರಪ್ಪ ಸಿಎಂ ಆದ ಕೂಡಲೇ ಪ್ರವಾಹ ಬಂದಿತ್ತು. ಬಿ.ಎಸ್.ಯಡಿಯೂರಪ್ಪ (B S Yediyurappa) ಒಬ್ಬರೇ ಪ್ರವಾಹ ಪರಿಸ್ಥಿತಿ ನಿಭಾಯಿಸಿದರು. ಕೊವಿಡ್ ವೇಳೆ ಜನರ ಪ್ರಾಣ ಉಳಿಸಲು BSY ಸರ್ಕಾರ ಪ್ರಯತ್ನಿಸಿತು. ಕಷ್ಟದ ಸಂದರ್ಭದಲ್ಲಿ ಯಡಿಯೂರಪ್ಪ ರಾಜ್ಯವನ್ನು ಕಾಪಾಡಿದರು. ಬಿ.ಎಸ್. ಯಡಿಯೂರಪ್ಪ ಬಳಿಕ ಅಧಿಕಾರಕ್ಕೆ ಬಂದವರು ಮಾಡಿದ್ದೇನು? ಬಿಎಸ್ವೈರಿಂದ ಅಧಿಕಾರ ಪಡೆದ ಅತಿರಥ ಮಹಾರಥರು ಮಾಡಿದ್ದೇನು? ಕಾರ್ಯಕರ್ತರ ಇಚ್ಛೆಗೆ ತಕ್ಕಂತೆ ನಡೆದು ಕೊಂಡರಾ? ಪ್ರವೀಣ್ ನೆಟ್ಟಾರು, ಹರ್ಷ ಕೊಲೆಯಾದಾಗ ಸೂಕ್ತ ಕ್ರಮ ಕೈಗೊಳ್ಳಲಿಲ್ಲ. ಮತ್ತೆ ಅಧಿಕಾರಕ್ಕೆ ತರಬೇಕೆಂಬ ಉತ್ಸಾಹ ಅವರಲ್ಲಿ ಯಾಕೆ ಕಾಣಲಿಲ್ಲ? ಜನರ ಆಕ್ರೋಶ, ಕಾರ್ಯಕರ್ತರ ನೋವಿಗೆ ನಾನು ಧ್ವನಿಯಾಗಿದ್ದೇನೆ ಎಂದು ಮಾಜಿ ಸಿಎಂ ಬೊಮ್ಮಾಯಿ ವಿರುದ್ಧ ಪ್ರತಾಪ್ ಸಿಂಹ ವಾಗ್ದಾಳಿ ನಡೆಸಿದರು.