ರಾಜಕೀಯಕ್ಕೂ ಗುರುಭವನ ಕಾರ್ಯಕ್ರಮಕ್ಕೂ ಯಾವುದೇ ಸಂಬಂಧವಿಲ್ಲ : ವಿ.ಸೋಮಣ್ಣ ಸ್ಪಷ್ಟನೆ

ತುಮಕೂರು : ತನ್ನ ಹಿರಿಯತನದ ಅನುಭವ ಹಾಗೂ ರಾಜ್ಯ ಬಿಜೆಪಿ ಘಟಕದ ನೂತನ ಅಧ್ಯಕ್ಷರಾಗಿ ಪಕ್ಷ ನಾಯಕನ ಸ್ಥಾನದ ಕುರಿತಾಗಿ ಬಿಜೆಪಿಯ ವಿರುದ್ಧವೇ ಅಸಮಾಧಾನ ಹೊರಹಾಕಿದ ಮಾಜಿ ಸಚಿವ ವಿ ಸೋಮಣ್ಣ ಇಂದು ತುಮಕೂರಿನ ಕ್ಯಾತ್ಸಂದ್ರ ಬಳಿ ಇರುವ ಸಿದ್ದಗಂಗಾ ಮಠದಲ್ಲಿ ನೂತನವಾಗಿ ನಿರ್ಮಿಸುವ ಗುರುಭವನವನ್ನು ಉದ್ಘಾಟಿಸಲಿದ್ದಾರೆ.

ಇದೆ ವೇಳೆ ಸಿದ್ದಗಂಗಾ ಮಠಕ್ಕೆ ಆಗಮಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ಈ ಸ್ಥಳದಲ್ಲಿ ಯಾವುದೇ ರಾಜಕೀಯ ವಿಚಾರ ಬಗ್ಗೆ ಮಾತನಾಡುವುದಿಲ್ಲ.ಈ ಕಾರ್ಯಕ್ರಮದಲ್ಲಿ ರಾಜಕೀಯ ಲೇಪ ಮಾಡುವುದು ಸರಿಯಲ್ಲ. ಡಿಸೆಂಬರ್ 6 ರ ನಂತರ ಕೆಲವು ವಿಚಾರ ಹೇಳುತ್ತೇನೆ ಎಂದು ಹೇಳಿದ್ದೇನೆ ಎಂದರು.

ಈ ಕಾರ್ಯಕ್ರಮ ಮುಗಿದ ಬಳಿಕ ರಾಜಕೀಯ ವಿಚಾರ ಮಾತನಾಡುತ್ತೇನೆ.ರಾಜಕೀಯಕ್ಕೂ ಗುರುಭವನ ಕಾರ್ಯಕ್ರಮಕ್ಕೂ ಯಾವುದೇ ಸಂಬಂಧವಿಲ್ಲ. ತುಮಕೂರಿನ ಸಿದ್ದಗಂಗಾ ಮಠದಲ್ಲಿ ಮಾಜಿ ಸಚಿವ ವಿಶ್ವಮಣ್ಣ ಹೇಳಿಕೆ ನೀಡಿದರು.

Latest Indian news

Popular Stories