ತರಗತಿಯಲ್ಲಿ ವಿದ್ಯಾರ್ಥಿಗೆ “ಭಯೋತ್ಪಾದಕ” ನೆಂದು ಕರೆದು ಅವಮಾನಿಸುವುದು ಖಂಡನಾರ್ಹ – ಎಸ್.ಐ.ಓ ಉಡುಪಿ

ಉಡುಪಿ ಜಿಲ್ಲೆಯ ಪ್ರತಿಷ್ಠಿತ ಖಾಸಗಿ ವಿಶ್ವವಿದ್ಯಾಲಯದ ಕಾಲೇಜೊಂದರ ತರಗತಿಯಲ್ಲಿ ವಿದ್ಯಾರ್ಥಿಯೊಬ್ಬನಿಗೆ “ಭಯೋತ್ಪಾದಕ” ಎಂಬ ಪದ ಬಳಕೆಗೆ ವಿದ್ಯಾರ್ಥಿ ತರಗತಿಯಲ್ಲೇ ತೀವ್ರವಾಗಿ ಆಕ್ಷೇಪ ವ್ಯಕ್ತಪಡಿಸಿದ ವೀಡಿಯೋ ವೈರಲಾಗಿದ್ದು ಈ ಘಟನೆಯನ್ನು ಎಸ್.ಐ.ಓ ಉಡುಪಿ ಜಿಲ್ಲೆ ತೀವ್ರವಾಗಿ ಖಂಡಿಸುತ್ತದೆ.

ಕ್ಯಾಂಪಸ್’ಗಳು ಪ್ರೀತಿ, ಸೌಹರ್ದತೆಯ ತಾಣಗಳಾಗಬೇಕು ಹೊರತು ದ್ವೇಷ ಬಿತ್ತುವ ಕೂಪಗಳಾಗಬಾರದು. ಪ್ರಾಧ್ಯಾಪಕರ ಈ ತಾರತಮ್ಯದ ಮನಸ್ಥಿತಿ ನಿಜಕ್ಕೂ ಆಘಾತಕಾರಿಯಾಗಿದ್ದು ಇಂತಹ ಮನಸ್ಥಿತಿಯ ಬೆಳವಣಿಗೆಯಿಂದಾಗಿ ದೇಶದ ಸಂವಿಧಾನದ ಆಶಯಕ್ಕೆ ಧಕ್ಕೆ ಉಂಟಾಗಲಿದೆ. ಈ ದೇಶದಲ್ಲಿ ಜಾತಿ-ಮತ-ಭೇದ ಇಲ್ಲದೆ ಪ್ರತಿಯೊಬ್ಬರಿಗೂ ಶಿಕ್ಷಣ ಪಡೆಯುವ ಹಕ್ಕಿದೆ. ಶಿಕ್ಷಣ ಪಡೆಯುವ ಕ್ಯಾಂಪಸ್ ಗಳು ವಿದ್ಯಾರ್ಥಿಗಳ ಪಾಲಿಗೆ ಹೆಚ್ಚು ಸುರಕ್ಷಿತವಾಗಿ ರೂಪುಗೊಳ್ಳಬೇಕೇ ವಿನಹ ಅಭದ್ರತೆಯ ವಾತಾವರಣಕ್ಕೆ ಕಾರಣವಾಗಬಾರದು. ಪ್ರಾಧ್ಯಾಪಕರ ಇಂತಹ ಅಪ್ರಬುದ್ಧ ನಡೆ ಅಲ್ಪಸಂಖ್ಯಾತ ಸಮುದಾಯಗಳ ವಿದ್ಯಾರ್ಥಿಗಳಲ್ಲಿ ಮತ್ತಷ್ಟು ಆತಂಕ ಸೃಷ್ಟಿಸುತ್ತದೆ.

ಪ್ರಾಧ್ಯಾಪಕರ ಈ ವರ್ತನೆಯ ವಿರುದ್ಧ ವಿಶ್ವವಿದ್ಯಾಲಯವು ಶಿಸ್ತು ಕ್ರಮ ಕೈಗೊಂಡು ಮುಂದೆ ಇಂತಹ ಘಟನೆಗಳು ಮರುಕಳಿಸದಂತೆ ನಿಗಾವಹಿಸಬೇಕೆಂದು ಈ ಮೂಲಕ ಎಸ್.ಐ‌.ಓ ಉಡುಪಿ ಜಿಲ್ಲೆ ಆಗ್ರಹಿಸುತ್ತದೆ.

Latest Indian news

Popular Stories

error: Content is protected !!