ಉಡುಪಿ : ಅಲೆವೂರು ಗ್ರಾಮ ಪಂಚಾಯತ್, ನೂತನ ಅಧ್ಯಕ್ಷರಾಗಿ ಯತೀಶ್ ಕುಮಾರ್ ಅಲೆವೂರು ಮತ್ತು ಉಪಾಧ್ಯಕ್ಷರಾಗಿ ಅಮೃತಾ ಪೂಜಾರಿ ಆಯ್ಕೆಯಾಗಿದ್ದಾರೆ.
ಅ.16ರಂದು ಗ್ರಾಮ ಪಂಚಾಯತ್ ನಲ್ಲಿ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ಪ್ರಕ್ರಿಯೆ ನಡೆದಿದ್ದು, ಇವರು ಚುನಾವಣಾ ಮುಖಾಂತರವಾಗಿ ಆಯ್ಕೆಗೊಂಡಿರುತ್ತಾರೆ.
ಈ ಸಂದರ್ಭದಲ್ಲಿ ಶ್ರೀ ವಿನಯ್ ಕುಮಾರ್ ಸೊರಕೆ, ಶ್ರೀ ಹರೀಶ್ ಕಿಣಿ, ಮಾಜಿ ಅಧ್ಯಕ್ಷರಾದ ಶ್ರೀಮತಿ ಪುಷ್ಪಾ ಅಂಚನ್,ಮಾಜಿ ಉಪಾಧ್ಯಕ್ಷರಾದ ಶ್ರೀ ಸುಧಾಕರ್ ಪೂಜಾರಿ, ಶ್ರೀ ಕಿಶನ್ ಹೆಗ್ಡೆ ಕೊಲ್ಕೆಬೈಲ್, ಶ್ರೀ ದಿನೇಶ್ ಪುತ್ರನ್, ಶ್ರೀ ಸಂತೋಷ್ ಕುಲಾಲ್ ಹಾಗೂ ಕಾಂಗ್ರೆಸ್ ಬೆಂಬಲಿತ ಗ್ರಾಮ ಪಂಚಾಯತ್ ಸದಸ್ಯರು, ಮತ್ತಿರರು ಉಪಸ್ಥಿತರಿದ್ದರು.