
Udupi
ಅಂಬಲಪಾಡಿ ಮೇಲ್ಸೇತುವೆ ಕಾಮಗಾರಿಗೆ ಚಾಲನೆ
ಉಡುಪಿ: ಅಂಬಲಪಾಡಿ ಮೇಲ್ಸೇತುವೆ ಕಾಮಗಾರಿಗೆ ಡಿಸೆಂಬರ್ 16 ರ ಸೋಮವಾರದಂದು ಚಾಲನೆ ನೀಡಲಾಗಿದೆ.
ಅಂಬಲಪಾಡಿ ಜಂಕ್ಷನ್ ನಲ್ಲಿ ಕಾಮಗಾರಿ ಆರಂಭವಾಗಿದ್ದು ಹೆದ್ದಾರಿ ಜಂಕ್ಷನ್ ಪ್ರವೇಶವನ್ನು ಇಕ್ಕೆಲಗಳಲ್ಲಿ ನಿರ್ಬಂಧಿಸಲಾಗಿದೆ. ಸರ್ವಿಸ್ ರೋಡ್ ನಲ್ಲಿ ವಾಹನಗಳು ಸಂಚರಿಸುತ್ತಿದೆ.

ಮಾರ್ಗ ಬದಲಾವಣೆ ಕುರಿತು ಇದುವರೆಗೆ ಯಾವುದೇ ಸರಿಯಾದ ಮಾರ್ಗಸೂಚಿ ಹೊರಡಿಸಿರದ ಕಾರಣ ವಾಹನ ಸವಾರರು ಗೊಂದಲಕ್ಕೀಡಾಗುವ ಸಾಧ್ಯತೆ ಇದೆ. ಕಾಮಗಾರಿ ಆರಂಭದಿಂದಾಗಿ ಉಡುಪಿ ನಗರ ಪ್ರವೇಶಿಸುವ ವಾಹನಗಳು ಕರಾವಳಿ ಬೈಪಾಸ್ ಅವಲಂಬಿಸುವುದರಿಂದ ಕರಾವಳಿ ಜಂಕ್ಷನ್ ನಲ್ಲಿ ವಾಹನ ದಟ್ಟಣೆಯಾಗುವ ಸಾಧ್ಯತೆ ಇದೆ.




