ಬಿರ್ತಿಯಲ್ಲಿ ಕತ್ತಲಹಾಡು…

ಇತ್ತೀಚೆಗೆ ತೆಂಕು ಬಿರ್ತಿಯ ಅಂಬೇಡ್ಕರ್ ಯುವಕ ಮಂಡಲ (ರಿ) ಮತ್ತು ಅಂಕದಮನೆ ಜಾನಪದ ಕಲಾತಂಡ (ರಿ). ಇವರ ಆಶ್ರಯದಲ್ಲಿ ಪ್ರಸಿದ್ಧ ಗಾಯಕ ನಾದ ಮಣಿನಾಲ್ಕೂರು ಅವರ ” ಕತ್ತಲ ಹಾಡು ” ಬೆಳಕಿನೆಡೆಗೆ ಕಾರ್ಯಕ್ರಮ ನಡೆಯಿತು‌.

ಕಾರ್ಯಕ್ರಮವನ್ನು ಖ್ಯಾತ ರಂಗ ಕರ್ಮಿಯವರಾದ ಶ್ರೀ. ರಾಜು ಮಣಿಪಾಲ ರವರು ದೀಪ ಬೆಳಗಿಸುವ ಮೂಲಕ ಉಧ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ವಾರಂಬಳ್ಳಿ ಪಂಚಾಯತ್ ಅಧ್ಯಕ್ಷರಾದ ನಿತ್ಯಾನಂದ ರಾವ್ , ಮತ್ತು ಖ್ಯಾತ ಕಲಾವಿದರಾದ ಮನು ಹಂದಾಡಿ ಯವರು ಆಗಮಿಸಿದ್ದರು.
ತೆಂಕು ಬಿರ್ತಿಯ ಬಬ್ಬುಸ್ವಾಮಿ ದೇವಸ್ಥಾನದ ವಠಾರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕೇವಲ ಹಣತೆ ದೀಪಗಳು , ಕಾಲು ದೀಪಗಳು ಮತ್ತು ದೀವಟಿಗೆ ಬೆಳಕಿನಲ್ಲಿ ನಾದ ಮಣಿನಾಲ್ಕೂರು ರವರು ಹಾಡುಗಾರಿಕೆ ನಡೆಸಿಕೊಟ್ಟರು.ಸಮಾಜದ ಅಂಕುಡೊಂಕುಗಳ ಬಗ್ಗೆ ಬೆಳಕು ಚೆಲ್ಲುವ ಹಾಡುಗಳು ಎಲ್ಲರ ಗಮನ ಸೆಳೆಯಿತು. ಹಾಡು ಹಾಡುತ್ತಾ ಈಗೀನ ದೇಶದ ಪರಿಸ್ಥಿತಿ , ಪ್ರಜೆಗಳ ಪರಿಸ್ಥಿತಿ , ಪರಿಸರ , ಪ್ರಕ್ರತಿ , ಮತ್ತು ನಾಗರೀಕರ ಕರ್ತವ್ಯ , ಹೆತ್ತವರ ಕರ್ತವ್ಯಗಳ ಬಗ್ಗೆ ಸಂವಾದ ನಡೆಸಿ ನೆರೆದವರಿಗೆ ಮನದಟ್ಟು ಮಾಡಿಕೊಟ್ಟದ್ದು ಅಧ್ಬುತವಾಗಿತ್ತು.

” ಕತ್ತಲ ಹಾಡು ” ಬೆಳಕಿನೆಡೆಗೆ ಒಂದು ವಿಶಿಷ್ಟ ಕಾರ್ಯಕ್ರಮವನ್ನು ಸವಿಯಲು ಉಡುಪಿ ಕುಂದಾಪುರ ದೂರದ ಊರುಗಳಿಂದ ಆಸಕ್ತರು ಆಗಮಿಸಿದ್ದರು.
ಈ ವಿಶಿಷ್ಟ ಕಾರ್ಯಕ್ರಮದಲ್ಲಿ ವಾರಂಬಳ್ಳಿ ಪಂಚಾಯತ್ ಮಾಜಿ ಅಧ್ಯಕ್ಷರಾದ ನಾಗವೇಣಿ ಪಂಡರಿನಾಥ್ , ಸಧಸ್ಯರಾದ ದೇವಾನಂದ ನಾಯಕ್ , ಅಂಬೇಡ್ಕರ್ ಯುವಕ ಮಂಡಲದ ಹರೀಶ್ಚಂದ್ರ ಕೆ.ಡಿ., ಪ್ರಶಾಂತ್ ಬಿರ್ತಿ , ಶಿವಾನಂದ ಬಿರ್ತಿ , ಸುಬ್ರಹ್ಮಣ್ಯ ಪ್ರಸಾದ್ ಕೋಟೇಶ್ವರ , ಸುಧಾಕರ ಮಾಸ್ಟರ್ ಗುಜ್ಜರಬೆಟ್ಟು , ಬಿರ್ತಿ ಸುರೇಶ , ವರದರಾಜ್ ಬಿರ್ತಿ , ಅನಿಲ ಬಿರ್ತಿ , ಸಂತೋಷ ಬಿರ್ತಿ ,ಚೈತನ್ಯ ಬಿರ್ತಿ , ಸ್ವರಾಜ್ ಬಿರ್ತಿ, ಕಿಶನ್ ಕುಮಾರ್ ಬಿರ್ತಿ,ಸಂದೇಶ ಬ್ರಹ್ಮಾವರ, ರಾಕೇಶ್ ಬಿರ್ತಿ, ಪ್ರಸನ್ನ ಚಾಂತಾರು, ಎಸ್.ನಾರಾಯಣ ಬಿರ್ತಿ , ಉಪಸ್ಥಿತರಿದ್ದರು. ಶ್ಯಾಮರಾಜ್ ಬಿರ್ತಿ ಸರ್ವರನ್ನೂ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.

IMG 20240203 WA0023 Udupi

IMG 20240203 WA0022 Udupi

IMG 20240203 WA0021 Udupi

Latest Indian news

Popular Stories