ಬ್ರಹ್ಮಾವರ: ಸುರಭಿ ಬಾರ್‌‌ ಅಂಡ್‌ ರೆಸ್ಟೋರೆಂಟ್‌ ಮ್ಯಾನೇಜರ್ ನಾಪತ್ತೆ

ಬ್ರಹ್ಮಾವರ: ಸುರಭಿ ಬಾರ್‌‌ ಅಂಡ್‌ ರೆಸ್ಟೋರೆಂಟ್‌ ಮ್ಯಾನೇಜರ್ ನಾಪತ್ತೆಯಾಗಿರುವ ಕುರಿತು ಪ್ರಕರಣ ದಾಖಲಾಗಿದೆ.

ಪೇತ್ರಿಯ ಸುರಭಿ ಬಾರ್‌‌ ಅಂಡ್‌ ರೆಸ್ಟೋರೆಂಟ್‌ನಲ್ಲಿ ಮ್ಯಾನೇಜರ್ ಆಗಿರುವ ಪ್ರಕಾಶ್‌ (47) ಎಂಬುವವರು ದಿನಾಂಕ 24/06/2024 ರಂದು ಬೆಳಿಗ್ಗೆ 10:30 ಗಂಟೆಗೆ ಬಾರ್‌ನಲ್ಲಿ ನಡೆಸಿದ ದೈನಂದಿನ ವ್ಯವಹಾರದ ಹಣವನ್ನು ಪೇತ್ರಿಯ ಬ್ಯಾಂಕ್‌ಗೆ ಜಮೆ ಮಾಡಿ ಬರುವುದಾಗಿ ಹಣವನ್ನು ತೆಗೆದುಕೊಂಡು ಹೋದವರು ವಾಪಾಸು ಬಾರದೇ ಇದ್ದು,ಅವರ ಮೊಬೈಲ್‌ ಕರೆ ಮಾಡಿದಾಗ ಸ್ವಿಚ್‌ ಆಫ್‌ ಆಗಿರುತ್ತದೆ. ನಂತರ ಈ ಬಗ್ಗೆ ವಿಚಾರಿಸಿದಾಗ ಮಧ್ಯಾಹ್ನ 2:00 ಗಂಟೆಗೆ ಬಾರ್‌ಲೈಸನ್ಸ್‌ ಬಗ್ಗೆ ಉಡುಪಿ ಅಬಕಾರಿ ಇಲಾಖೆಗೆ ಹೋಗಿರುವುದಾಗಿ ತಿಳಿದು ಬಂದಿರುತ್ತದೆ. ಪ್ರಕಾಶ್‌ ರವರು ಬಾರ್‌ಗೂ ಬಾರದೇ, ಮನೆಗೆ ಹೋಗದೇ ಕಾಣೆಯಾಗಿರುತ್ತಾರೆ.

ಈ ಬಗ್ಗೆ ಬ್ರಹ್ಮಾವರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 165/2024 ಕಲಂ : ಗಂಡಸು ಕಾಣೆಯಂತೆ ಪ್ರಕರಣ ದಾಖಲಾಗಿರುತ್ತದೆ.

Latest Indian news

Popular Stories