ಬೈಂದೂರು: ಕೊಟ್ಟಿಗೆಯಿಂದ ಮೂರು ದನ ಕಳ್ಳತನ – ಪ್ರಕರಣ ದಾಖಲು

ಬೈಂದೂರು: ಯಡ್ತಾರೆ ಗ್ರಾಮದ ಸತೀಶ್ ಮತ್ತು ಅವರ ಸಂಬಂಧಿಯ ಮನೆಯ ಸಮೀಪದ ಕೊಟ್ಟಿಗೆಯಿಂದ ಅಪರಿಚಿತರು ಒಟ್ಟು ಮೂರು ದನ ಕಳ್ಳತನ ಮಾಡಿದ್ದಾರೆ.

ನಾಲ್ಕೈದು ಜನರ ತಂಡ ಜನವರಿ 3 ರಂದು ಕೃತ್ಯ ಎಸಗಿದ್ದಾರೆ. ಸತೀಶ್ ಅವರ ಕೊಟ್ಟಿಗೆಯಲ್ಲಿದ್ದ ಐದು ದನದಲ್ಲಿ ಒಂದು ದನವನ್ನು ಕದ್ದರೆ, ಅವರ ಸಂಬಂಧಿ ಭರತ್ ಅವರ ಕೊಟ್ಟಿಗೆಯಿಂದ ಎರಡು ದನ ಕಳವುಗೈಯಲಾಗಿದೆ. ಕಳವಾದ ದನಗಳ ಒಟ್ಟು ಅಂದಾಜು ಮೌಲ್ಯ 40 ಸಾವಿರವಾಗಿರುತ್ತದೆ.

ಈ ಬಗ್ಗೆ ಬೈಂದೂರು ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ  30 /2024 ಕಲಂ: 380 506(2), ಜೊತೆಗೆ 34  ಐಪಿಸಿ ಯಂತೆ ಪ್ರಕರಣ ದಾಖಲಿಸಲಾಗಿದೆ.

Latest Indian news

Popular Stories