Udupi

ಉಡುಪಿ ಜಿಲ್ಲಾ ಮೀನುಗಾರರ ಮತ್ತು ಮೀನು ಕಾರ್ಮಿಕರ ಸಂಘ (ಸಿಐಟಿಯು) ಗಂಗೋಳ್ಳಿ ಯಲ್ಲಿ ನಡೆದ ದೋಣಿ ದುರಂತ ಸಮಗ್ರ ತನಿಖೆಗೆ ಅಗ್ರಹ

ಕುಂದಾಪುರದ ಗಂಗೋಳ್ಳಿ ಬಂದರಿನ ಮ್ಯಾಗನೀಸ್ ರಸ್ತೆಯಲ್ಲಿ ನಡೆದ ಅಗ್ನಿ ದುರಂತದಲ್ಲಿ 11ಮೀನುಗಾರಿಕಾ ಬೋಟ್ ,ಕಾರ್ಮಿಕರ ದ್ವಿಚಕ್ರ ವಾಹನಗಳು ಮತ್ತು ಮೀನುಗಾರಿಕೆ ಯ ಬಲೆಗಳು ಸೇರಿ ಕೋಟ್ಯಂತರ ರೂಪಾಯಿ ನಷ್ಟ ಉಂಟಾಗಿದ್ದು ಸಮಗ್ರ ತನಿಖೆ ನಡೆಸಬೇಕು ಹಾಗೂ ಬೋಟ್ ಮಾಲೀಕರಿಗೆ ಮತ್ತು ಕಾರ್ಮಿಕರ ದ್ವಿಚಕ್ರ ವಾಹನಕ್ಕೆ ಸರಿಯಾದ ಪರಿಹಾರ ಸರಕಾರ ನೀಡಬೇಕು ಎಂದು ಉಡುಪಿ ಜಿಲ್ಲಾ ಮೀನುಗಾರರ ಮತ್ತು ಮೀನು ಕಾರ್ಮಿಕ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕವಿರಾಜ್. ಎಸ್ ಒತ್ತಾಯಿಸಿದ್ದಾರೆ.

11ಬೋಟ್ ಗಳಲ್ಲಿ ನೂರಾರು ಮೀನುಗಾರಿಕೆ ವ್ರತ್ತಿಯನ್ನು ಅವಲಂಬಿಸಿರುವ ಕಾರ್ಮಿಕರು ಇಂದು ಅತಂತ್ರರಾಗಿದ್ದಾರೆ ದೀಪಾವಳಿ ಹಬ್ಬದ ಸಂಭ್ರಮದಲ್ಲಿ ಇರಬೇಕಾದ ಕಾರ್ಮಿಕರು ಹಾಗೂ ಮಾಲಿಕರ ಮನೆಯಲ್ಲಿ ದುಃಖವನ್ನು ಅನುಭವಿಸುವಂತಾಗಿದೆ ಅದ್ದರಿಂದ ಈ ಕೂಡಲೇ ಪೋಲಿಸ್ ಅಧಿಕಾರಯವರು ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥರನ್ನು ಕೂಡಲೇ ತನಿಖೆಗೆ ಒಳಪಡಿಸಿ ಬೋಟ್ ಮಾಲಕರಿಗೆ ಹಾಗೂ ಕಾರ್ಮಿಕರಿಗೆ ನ್ಯಾಯ ಒದಗಿಸಿ ಸರಕಾರ ಕೂಡಲೇ ಪರಿಹಾರ ಒದಗಿಸಬೇಕು. ಎಂದು ಉಡುಪಿ ಜಿಲ್ಲಾ ಮೀನುಗಾರರ ಹಾಗೂ ಮೀನು ಕಾರ್ಮಿಕರ ಸಂಘ (ಸಿಐಟಿಯು)ಒತ್ತಾಯಿಸಿದೆ.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Back to top button