ಉಡುಪಿ: ಕಳೆದ ಕೆಲವು ದಿನಗಳಿಂದ ಉಡುಪಿ ಜಿಲ್ಲೆಯಲ್ಲಿ ಸುರಿಯುತ್ತಿರುವ ಭಾರೀ ಮಳೆಯು ಸೋಮವಾರ ಮುಂಜಾನೆವರೆಗೆ ಮುಂದುವರಿದಿದೆ.
ತಗ್ಗು ಪ್ರದೇಶಗಳು ಜಲಾವೃತಗೊಂಡಿದ್ದು ಮತ್ತೆ ನಿರಂತರ ಮಳೆ ಮುಂದುವರಿದರೆ ನದಿ ತೀರಾ ಪ್ರದೇಶದಲ್ಲಿ ನೆರೆ ಭೀತಿ ಉಂಟಾಗಿದೆ.
ಗಾಳಿ-ಸಹಿತ ಮಳೆಯಾಗುತ್ತಿದ್ದು ಜಿಲ್ಲೆಯಾದ್ಯಂತ ಕೆಲವೆಡೆ ಹಾನಿಯ ವರದಿಯಾಗಿದೆ.
ಕುಂದಾಪುರ ಹಾಗೂ ಬೈಂದೂರು ತಾಲೂಕಿನಾದ್ಯಂತ ಭಾನುವಾರ ಮಧ್ಯಾಹ್ನದ ಬಳಿಕ ವಿಪರೀತ ಮಳೆಯಾಗಿರುವ ಬಗ್ಗೆ ವರದಿಯಾಗಿದೆ.
ಕಳೆದ 24ಗಂಟೆ ಅವಧಿಯಲ್ಲಿ ಉಡುಪಿ ಜಿಲ್ಲೆಯಲ್ಲಿ ಸರಾಸರಿ 42.2 ಮಿ.ಮೀ. ಮಳೆಯಾಗಿದ್ದು, ಕಾರ್ಕಳ- 39.8ಮಿ.ಮೀ., ಕುಂದಾಪುರ- 42.0 ಮಿ.ಮೀ., ಉಡುಪಿ- 47.5ಮಿ.ಮೀ., ಬೈಂದೂರು- 37.8ಮಿ.ಮೀ., ಬ್ರಹ್ಮಾವರ- 43.8ಮಿ.ಮೀ., ಕಾಪು- 43.1ಮಿ.ಮೀ., ಹೆಬ್ರಿ- 46.9 ಮಿ.ಮೀ. ಮಳೆಯಾಗಿದೆ.