UdupiPRESS RELEASE / ORGANISATIONS

ಹೂಡೆ: ಮದರಸಾ ದಾರುಸ್ಸಲಾಮ್ ನೂತನ ಕಟ್ಟಡ ಉದ್ಘಾಟನೆ

ಹೂಡೆ: ಮದರಸಾ ದಾರುಸ್ಸಲಾಮ್ ಇದರ ನೂತನ ಕಟ್ಟಡವನ್ನು ಬುಧವಾರ ಉದ್ಘಾಟಿಸಲಾಯಿತು. ಮೌಲನ ಶಾಕೀರ್ ನೂರಿಯವರು ನೂತನ ಕಟ್ಟಡವನ್ನು ಉದ್ಘಾಟಿಸಿದರು.

IMG20231101105934 1698860209240 Udupi, PRESS RELEASE / ORGANISATIONS IMG20231101114734 1698860209409 Udupi, PRESS RELEASE / ORGANISATIONS Screenshot 2023 11 01 22 58 24 89 f9ee0578fe1cc94de7482bd41accb329 Udupi, PRESS RELEASE / ORGANISATIONS

ನೂತ ಕಟ್ಟಡ ಉದ್ಘಾಟನೆಯ ನಂತರ ಸಂಜೆ ನಡೆದ ಸಭಾ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಮೌಲನ‌ ಮುಸ್ತಫಾ ಸಾದಿ, ” ಇಸ್ಲಾಮ್ ಈ ನೆಲದಲ್ಲಿ ಬಲವಂತವಾಗಿ ಹರಡಿಲ್ಲ. ಸೂಫಿ, ಸಂತರ ಸುಂದರ ಬದುಕಿನ ಚೌಕಟ್ಟು ಕಂಡು, ಎಲ್ಲರೊಂದಿಗಿನ ಅವರ ಸೌಹಾರ್ದ ಸಂಬಂಧ ಕಂಡು ಇಸ್ಲಾಮಿನತ್ತ ಜನರು ಬಂದರು. ದಾರುಸ್ಸಲಾಮ್ ಮದ್ರಸಾ ಇಂದು ವಿದ್ಯಾರ್ಥಿಗಳಿಗೆ ಧಾರ್ಮಿಕ, ಲೌಕಿಕ ಶಿಕ್ಷಣ ಕೊಟ್ಟು ಜಿಲ್ಲೆಯಲ್ಲಿ ಅತ್ಯುತ್ತಮ ಹೆಸರುಗಳಿಸಿದೆ ಎಂದರು. ವಿದ್ಯೆಗಾಗಿ ಮದ್ರಾಸ ಕಟ್ಟಿದ ನಿಮಗೆ ದೇವನು ಸೂಕ್ತ ಪ್ರತಿಫಲ ನೀಡಲಿದ್ದಾನೆಂದು ಪ್ರಾರ್ಥಿಸಿದರು.‌

ಕಾರ್ಯಕ್ರಮದಲ್ಲಿ ಉದ್ಯಮಿ ಹಾಜಿ ಅಬ್ದುಲ್ ಜಲೀಲ್ ಉದ್ಯಾವರ, ಉದ್ಯಮಿ ವಾಹೀದ್ ಉದ್ಯಾವರ ಸೇರಿದಂತೆ ಹಲವಾರು ಮಂದಿ ಮಾತನಾಡಿದರು.

ಈ ಸಂದರ್ಭದಲ್ಲಿ ಕಟ್ಟಡ ನಿರ್ಮಿಸಿದ ಸೈಮ್ ಗ್ರೂಪ್ಸ್ ಸಂಸ್ಥೆಯ ನಿರ್ದೇಶಕ ಇಮ್ತಿಯಾಝ್ ಗುಡ್ಮಿಯವರನ್ನು ದಾರುಸ್ಸಲಾಮ್ ಮದರಸಾ ಕಮಿಟಿ ವತಿಯಿಂದ ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ದಾರುಸ್ಸಲಾಮ್ ಮದರಸಾ ಸಮಿತಿಯ ಅಧ್ಯಕ್ಷರಾದ ಅಶ್ರಫ್.ಜಿ, ಉದ್ಯಮಿಗಳಾದ ಜಾಫರ್ ಬೈಕಾಡಿ,ಟಿ.ಎಮ್ ರಹ್ಮತುಲ್ಲಾ ಹೂಡೆ ಸೇರಿದಂತೆ ಹಲವಾರು ಮಂದಿ ಉಪಸ್ಥಿತರಿದ್ದರು.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Back to top button