ಕಲ್ಯಾಣಪುರ ಸುವರ್ಣ ನದಿಯಲ್ಲಿ ಅಪರಿಚಿತ ಶವ ಪತ್ತೆ

ಮಲ್ಪೆ: ಕಲ್ಯಾಣಪುರ ಸುವರ್ಣ ನದಿಯಲ್ಲಿ ಅಪರಿಚಿತ ಪುರುಷನ ಮೃತದೇಹ ತೇಲುತ್ತಿದ್ದ ರೀತಿಯಲ್ಲಿ ಪತ್ತೆಯಾಗಿದೆ. ವಯಸ್ಸು ಸುಮಾರು 28-30 ವರ್ಷ ಆಗಿದ್ದು, ನೀರಿಗೆ ಬಿದ್ದು ಎರಡು ದಿನ ಅಗಿರಬಹುದೆಂದು ಅಂದಾಜಿಸಲಾಗಿದೆ.

ಸ್ಥಳೀಯರು ಮೃತದೇಹವನ್ನು ದಡಕ್ಕೆ ಸೇರಿಸಿದ್ದು, ಮೃತರ ಮೈಮೇಲೆ ನೀಲಿ ಬಣ್ಣದ ಶರ್ಟ್‌, ಕಪ್ಪು ಬಣ್ಣದ ಪ್ಯಾಂಟ್‌ ಇದೆ. ಆಕಸ್ಮಿಕವಾಗಿ ನದಿ ನೀರಿಗೆ ಬಿದ್ದರಬಹುದೆಂದು ಶಂಕಿಸಲಾಗಿದೆ. ಮಲ್ಪೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Latest Indian news

Popular Stories