ಉಡುಪಿ: ಹಿಂದೂ ಮುಸ್ಲಿಂ ಹಬ್ಬಗಳ ಸಂದರ್ಭದಲ್ಲಿ ಪರಸ್ಪರ ವೈನಮಸ್ಸು ಉಂಟು ಮಾಡುವ ಪ್ರಸಂಗಗಳು ಕರಾವಳಿಯಲ್ಲಿ ನಡೆಯುತ್ತಿವೆ.ಆದರೆ ಸೌಹಾರ್ದ ಬಯಸುವ ಮನಸ್ಸುಗಳು ಎಲ್ಲ ಧರ್ಮಗಳಲ್ಲೂ ಇದ್ದಾರೆ ಎಂಬುದಕ್ಕೆ ಪದೇಪದೆ ಸಾಕ್ಷಿಗಳು ಸಿಗುತ್ತಿವೆ.
ಇಂದು ಮುಸಲ್ಮಾನರಿಗೆ ಪವಿತ್ರ ಈದ್ ಮಿಲಾದ್ ಸಂಭ್ರಮ.ಉಡುಪಿಯ ನೇಜಾರಿನ ಜಾಮಿಯಾ ಮಸೀದಿಯಲ್ಲಿ ಈದ್ ಮಿಲಾದ್ ಹಬ್ಬದ ಪ್ರಯುಕ್ತ ನಡೆದ ಮೆರವಣಿಗೆ ಹಮ್ಮಿಕೊಳ್ಳಲಾಗಿತ್ತು.ಈ ಸಂದರ್ಭದಲ್ಲಿ ಕೆಳಾರ್ಕಳಬೆಟ್ಟು -ನೇಜಾರಿನ ಹಿಂದೂ ಭಾಂಧವರು ಮುಸಲ್ಮಾನ ಬಾಂಧವರಿಗೆ ತಂಪು ಪಾನೀಯ ನೀಡುವ ಮೂಲಕ ಪರಸ್ಪರ ಧರ್ಮ ಸೌಹಾರ್ದತೆ ಮೆರಿದಿದ್ದು ,ಕರಾವಳಿಯ ಜನರಿಗೆ ಸೌಹಾರ್ದದ ಸಂದೇಶ ರವಾನಿಸಿದ್ದಾರೆ.