
Udupi
ಉಡುಪಿ ಜಿಲ್ಲೆಯಲ್ಲಿ ಈದ್ ಉಲ್ ಫಿತರ್ ಹಬ್ಬದ ಪ್ರಯುಕ್ತ ಸರಕಾರಿ ರಜೆ ಎ.11ರ ಬದಲಾಗಿ ಎ.10 ಕ್ಕೆ
ಉಡುಪಿ ಜಿಲ್ಲೆಯಲ್ಲಿ ಈದ್ ಉಲ್ ಫಿತರ್ ಹಬ್ಬದ ಪ್ರಯುಕ್ತ ಸರಕಾರಿ ರಜೆಯನ್ನು ಎ.11ರ ಬದಲಾಗಿ ಎ.10ರಂದು ಘೋಷಿಸಿ ಉಡುಪಿ ಜಿಲ್ಲಾಡಳಿತ ಆದೇಶ ಹೊರಡಿಸಿದೆ.
ಸರ್ಕಾರದ ಅಧೀನ ಕಾರ್ಯದರ್ಶಿ ಸಿಆಸುಇ (ರಾಜ್ಯ ಶಿಷ್ಟಾಚಾರ) ವಿಜಯ್ಕುಮಾರ್ ಎಚ್ ಬಿ ನಿರ್ದೇಶನ ದಂತೆ ಸಾರ್ವಜನಿಕ ಬೇಡಿಕೆಯ ಹಿನ್ನಲೆಯಲ್ಲಿ ರಂಜಾನ್ ಹಬ್ಬಕ್ಕೆ ಸಂಬಂಧಿಸಿ ಉಡುಪಿ ಜಿಲ್ಲೆಯಲ್ಲಿ ರಂಜಾನ್ ಹಬ್ಬದ ಎ.11ರ ರಜೆಯನ್ನು ರದ್ದುಗೊಳಿಸಿ ಎ.10ರ ಬುಧವಾರರಂದು ಸಾರ್ವತ್ರಿಕ ರಜೆಯನ್ನು ಘೋಷಿಸಿ ಉಡುಪಿ ಜಿಲ್ಲಾಧಿಕಾರಿ ಡಾ. ವಿದ್ಯಾಕುಮಾರಿ ಆದೇಶ ಹೊರಡಿಸಿದ್ದಾರೆ.
ಇದು ಎ.10ರಂದು ಪೂರ್ವ ನಿಯೋಜಿತಗೊಂಡಿರುವ ಶಾಲಾ ಕಾಲೇಜುಗಳ ಪರೀಕ್ಷೆಗಳಿಗೆ ಅನ್ವಯಿಸುವುದಿಲ್ಲ. ತಿಳಿಸಲಾಗಿದೆ. ಅದೇ ರೀತಿ ಎ.11ರಂದು ಕರ್ತವ್ಯದ ದಿನವೆಂದು ಪರಿಗಣಿಸಲು ಆದೇಶದಲ್ಲಿ ಸೂಚಿಸಲಾಗಿದೆ.




