ಬೈಂದೂರಿನಲ್ಲಿ ಪಶುವೈದ್ಯರ ಕೊರತೆ ಬಗ್ಗೆ ವಿಧಾನ ಸೌಧದಲ್ಲಿ‌ಪ್ರಸ್ತಾಪಿಸಿದ ಶಾಸಕ ಗುರುರಾಜ್ ಗಂಟಿಹೊಳೆ

ಬೈಂದೂರಿನಲ್ಲಿ ಪಶುವೈದ್ಯರ ಕೊರತೆ ಬಗ್ಗೆ ವಿಧಾನಸಭೆಯಲ್ಲಿ ಬೈಂದೂರು ಶಾಸಕ ಗುರುರಾಜ್​ ಗಂಟಿಹೊಳೆ ಪ್ರಸ್ತಾಪ ಮಾಡಿದರು.

ನಮ್ಮ ಕ್ಷೇತ್ರದ 83 ಸಾವಿರ ಜಾನುವಾರುಗಳಿಗೆ 2 ಪಶು ವೈದ್ಯರಿದ್ದಾರೆ. ಸರ್ಕಾರದ ಉತ್ತರ ನೋಡಿ ನನಗೆ ತಲೆಬಿಸಿಯಾಗಿದೆ ಎಂದರು. ಇದಕ್ಕೆ ಪಶುಸಂಗೋಪನಾ ಸಚಿವ ವೆಂಕಟೇಶ್ ಉತ್ತರಿಸಿದ್ದು ಡಿಸೆಂಬರ್​ ಒಳಗೆ ಅಗತ್ಯ ಪಶುವೈದ್ಯರ ನೇಮಕ ಮಾಡಲಾಗುವುದು. ಶೀಘ್ರದಲ್ಲೇ 200 ಪಶು ವೈದ್ಯರ ನೇಮಕಕ್ಕೆ ಕ್ರಮ ಕೈಗೊಳ್ಳುತ್ತೇವೆ. ಹೆಚ್ಚುವರಿ ಪಶುವೈದ್ಯರ ವರ್ಗಾವಣೆಗೂ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ಕೊಟ್ಟರು. ಆಗ ನಮ್ಮ ಕಡೆಯೂ ಪಶುವೈದ್ಯರ ಕೊರತೆ ಇದೆ, ಗಮನಹರಿಸಿ ಎಂದು ಸ್ಪೀಕರ್ ಈ ಸಂದರ್ಭದಲ್ಲಿ ಮನವಿ ಮಾಡಿದರು.

Latest Indian news

Popular Stories