ಹಿರಿಯಡ್ಕ: ಮನೆಯೊಂದರ ಮೇಲೆ ದಾಳಿ ನಡೆಸಿದ ಪೊಲೀಸರು; ಸಜೀವ ಗುಂಡುಗಳು,ಡೆಟೋನೇಟರ್‌, ಗಾಂಜಾ ಸೇರಿದಂತೆ ಅಕ್ರಮ ಸೊತ್ತುಗಳು ವಶಕ್ಕೆ!

ಹಿರಿಯಡ್ಕ: ಖಚಿತ ಮಾಹಿತಿಯ ಮೇರೆಗೆ ಬ್ರಹ್ಮಾವರ ಠಾಣೆಯ ಪೊಲೀಸರು ಮಧು ಬಿ.ಇ ನೇತೃತ್ವದಲ್ಲಿ ಹಿರಿಯಡ್ಕ ಠಾಣಾ ವ್ಯಾಪ್ತಿಯ ರೌಡಿ ಅಸಾಮಿ ದಿವಾಕರ ಎಂಬಾತನ ಮನೆಯ ಮೇಲೆ ದಾಳಿ‌ ಮಾಡಿ ಪರಿಶೀಲನೆ ನಡೆಸಿದಾಗ ಹಲವು ಅಕ್ರಮ ಸೊತ್ತುಗಳು ಪತ್ತೆಯಾಗಿದೆ.

ಕಪ್ಪು ಬಣ್ಣದ ಬಟ್ಟೆ ಪೌಚ್‌ , ಸಜೀವ ಮದ್ದು ಗುಂಡುಗಳು, ಮಸಿ ಕೋವಿಗೆ ಬಳಸುವ ಮದ್ದುಗುಂಡುಗಳು, ಪ್ಲಾಸ್ಟಿಕ್‌ ಪೌಚ್‌ ನಲ್ಲಿ ಇರಿಸಲಾದ ಡೆಟೋನೇಟರ್‌ ಗಳು, ಪ್ಲಾಸ್ಟಿಕ್‌ ಪೌಚ್‌ನಲ್ಲಿ ಇರಿಸಲಾದ ಯಾವುದೋ ಪ್ರಾಣಿಯ ಹಲ್ಲಿನ ಆಕಾರದ ಸ್ವತ್ತುಗಳು , ಪ್ಲಾಸ್ಟಿಕ್‌ ಪೌಚ್‌ನಲ್ಲಿ ಇರಿಸಲಾದ ಯಾವುದೋ ಪ್ರಾಣಿಯ ಉಗುರಿನ ಆಕಾರದ ಸ್ವತ್ತುಗಳು, ಪಾಸ್ಟಿಕ್‌ ಪೌಚ್‌ನಲ್ಲಿ ಇರಿಸಿದ ಪಿಸ್ತೂಲ್‌ಗೆ ಬಳಸುವ 7.65 mm ಸಜೀವ ಗುಂಡುಗಳು, 15 ಇಂಚು ಉದ್ದದ ಹಳೆಯ ಕೋವಿಯ ಮರದ ಬಟ್‌ , 15 ಇಂಚು ಉದ್ದದ ಹಳೆಯ ಕೋವಿಯ ಮರದ ಬಟ್‌, ಹಾಕಿ ಸ್ಟಿಕ್‌ , ಸ್ಟೀಲ್‌ ಚಾಕುಗಳು, ಸ್ಟೀಲಿನ ದೊಡ್ಡ ಗಾತ್ರದ ಮಚ್ಚು, ನೀಲಿ ಬಣ್ಣದ ಪ್ಲಾಸ್ಟಿಕ್‌ ಚೀಲದಲ್ಲಿದ್ದ ಒಣಗಿಸಿದ ಗಾಂಜಾ, ಸಣ್ಣ ಖಾಲಿ ಪ್ಲಾಸ್ಟಿಕ್‌ ಪೌಚ್‌ಗಳು, ಪ್ಲಾಸ್ಟಿಕ್‌ ಕ್ಯಾನ್‌ ನಲ್ಲಿ ತುಂಬಿಸಿಟ್ಟಿರುವ ಸ್ಪಿರೀಟ್‌ ಇವುಗಳನ್ನು ದಾಳಿಯಲ್ಲಿ ಸ್ವಾಧೀನಪಡಿಸಿಕೊಳ್ಳಲಾಗಿದೆ.

ಈ ಬಗ್ಗೆ ಹಿರಿಯಡ್ಕ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 30/2024 ಕಲಂ : ARMS ACT, 1959 (U/s-3(I),25); NARCOTIC DRUGS & PSYCHOTROPIC SUBSTANCES ACT, 1985 (U/s-8(c),20(b) (ii) A); WILD LIFE (PROTECTION) ACT, 1972 (U/s-9,2,48,51); KARNATAKA EXCISE ACT, 1965 (U/s-32,34) ರಂತೆ ಪ್ರಕರಣ ದಾಖಲಾಗಿರುತ್ತದೆ.

Latest Indian news

Popular Stories