ಉಡುಪಿ: ಮುಂಬೈ ಹೊಟೇಲ್ ಉದ್ಯೋಗಿ ರಾತ್ರೋರಾತ್ರಿ ಮನೆಗೆ ಆಗಮಿಸಿ ಆತ್ಮಹತ್ಯೆ

ಉಡುಪಿ: ಮುಂಬೈ ಹೊಟೇಲ್ ಉದ್ಯೋಗಿಯೊಬ್ಬರು ರಾತ್ರೋರಾತ್ರಿ ಮನೆಗೆ ಆಗಮಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಸೆ.7ರಂದು ಅಂಬಾಗಿಲು ಪೇರಂಪಲ್ಲಿಯ ಕಕ್ಕಿಂಜೆ ದೇವಿನಗರ ಎಂಬಲ್ಲಿ ನಡೆದಿದೆ.

ಮೃತರನ್ನು ದೇವಿನಗರದ ಸುಕೇಶ್ ಶೆಟ್ಟಿ(51) ವರ್ಷ ಎಂದು ಗುರುತಿಸ ಲಾಗಿದೆ. ರಾತ್ರಿ ಹೊತ್ತಿನಲ್ಲಿ ಮುಂಬೈಯಿಂದ ಆಗಮಿಸಿ, ಮನೆಯ ಹೊರಗಡೆ ಇರುವ ಬಟ್ಟೆ ಒಗೆಯುವ ಸ್ಥಳದಲ್ಲಿ ಕಬ್ಬಿಣದ ಪೈಪಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿ ಕೊಂಡಿದ್ದಾರೆ. ಆತ್ಮಹತ್ಯೆಗೆ ಕಾರಣ ತಿಳಿದುಬಂದಿಲ್ಲ. ಮೃತದೇಹವನ್ನು ಮಣಿಪಾಲ ಶವಾಗಾರಕ್ಕೆ ಸಾಗಿಸಲು ಸಮಾಜ ಸೇವಕ ನಿತ್ಯಾನಂದ ಒಳಕಾಡು ಸಹಕರಿಸಿದರು. ಸ್ಥಳಕ್ಕೆ ಮಣಿಪಾಲ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ

Latest Indian news

Popular Stories