ಕಾರ್ಕಳ: ರಾಹುಲ್‌ ಗಾಂಧಿ ವಿರುದ್ಧ ಅವಹೇಳನಕಾರಿ ಪೋಸ್ಟ್‌: ದೂರು

ಕಾರ್ಕಳ: ಕಾಂಗ್ರೆಸ್‌ ಮುಖಂಡ ರಾಹುಲ್‌ ಗಾಂಧಿ ವಿರುದ್ಧ ಜಾಲತಾಣದಲ್ಲಿ ಅವಹೇಳನಕಾರಿ ಪೋಸ್ಟ್‌ ಹಂಚಿಕೊಂಡಿದ್ದ ಸುಮಂತ್‌ ಬಾಳಿಗ ವಿರುದ್ಧ ಜಿಲ್ಲಾ ಯುವ ಕಾಂಗ್ರೆಸ್‌ ಪ್ರ.ಕಾರ್ಯದರ್ಶಿ ಸುಹಾಶ್‌ ಎಂಬುವರು ಕಾರ್ಕಳ ನಗರ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ರಾಹುಲ್‌ ಗಾಂಧಿ ಭಾವಚಿತ್ರಕ್ಕೆ ಹೂಮಾಲೆ ಹಾಕಿ ಅಗರಬತ್ತಿ ಹಚ್ಚಿ ಶ್ರದ್ಧಾಂಜಲಿ ಸಲ್ಲಿಸುವಂತೆ ಫೇಸ್‌ಬುಕ್‌ನಲ್ಲಿ ಮೌಸಮಿ ಅಫಿಷಿಯಲ್‌ ಎಂಬ ಪೇಜ್‌ನಲ್ಲಿ ಪೋಸ್ಟ್‌ ಮಾಡಿರುವುದನ್ನು ಸುಮಂತ್‌ ಬಾಳಿಗ ಹಂಚಿಕೊಂಡಿದ್ದಾರೆ.

ಎರಡು ರಾಜಕೀಯ ಪಕ್ಷಗಳ ಮುಖಂಡರ ಸಮುದಾಯದ ನಡುವೆ ವೈರತ್ವ ಬೆಳೆಸಿ ದ್ವೇಷ ಭಾವನೆ ಹರಡುವ ಉದ್ದೇಶದಿಂದ ಫೋಟೋ ಹಂಚಿ ಜಾಲತಾಣದಲ್ಲಿ ಪ್ರಸಾರ ಮಾಡಿದ್ದಾನೆ. ಆದ್ದರಿಂದ ಸುಮಂತ್‌ ಬಾಳಿಗ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕಾಗಿ ದೂರಿನಲ್ಲಿ ಕೋರಿದ್ದಾರೆ.

Latest Indian news

Popular Stories