ಕಬಡ್ಡಿ’ ಆಡುವಾಗಲೇ ಹೃದಯಾಘಾತದಿಂದ ಕುಸಿದುಬಿದ್ದು ಯುವ ಆಟಗಾರ ಸಾವು

ಕಾರ್ಕಳ : ಕಬಡ್ಡಿ ಆಡುವಾಗಲೇ ಹೃದಯಾಘಾತದಿಂದ ಕುಸಿದುಬಿದ್ದು ಆಟಗಾರ ಸಾವನ್ನಪ್ಪಿದ ಘಟನೆ ಮಂಡ್ಯದ ನಾಗಮಂಗಲದಲ್ಲಿ ನಡೆದಿದೆ.

ಮೃತರನ್ನು ಪ್ರೀತಮ್ ಶೆಟ್ಟಿ (24) ಎಂದು ಗುರುತಿಸಲಾಗಿದೆ. ಕುಸಿದು ಬಿದ್ದು ಅಸ್ವಸ್ಥಗೊಂಡಿದ್ದ ಪ್ರೀತಮ್ ಅವರನ್ನು ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾನೆ.

ಉಡುಪಿ ಜಿಲ್ಲೆಯ ಹೆಬ್ರಿ ಮೂಲದ ಪ್ರೀತಮ್ ಶೆಟ್ಟಿ ಹನುಮ ಜಯಂತಿ ಹಿನ್ನೆಲೆ ನಿನ್ನೆ ಕಬಡ್ಡಿ ಪಂದ್ಯದಲ್ಲಿ ಪ್ರೀತಮ್ ಶೆಟ್ಟಿ ಭಾಗಿಯಾಗಿದ್ದರು.

Latest Indian news

Popular Stories