ಕುಂದಾಪುರ: ಹಿಂದಕ್ಕೆ ಚಲಿಸಿದ ಟಿಪ್ಪರ್- ವ್ಯಕ್ತಿ ಮೃತ್ಯು

ಕುಂದಾಪುರ: ಮನೆಯ ಬಾವಿ ಆವರಣದ ನಿರ್ಮಾಣಕ್ಕೆ ಮರಳು ಹೊತ್ತು ತಂದ ಟಿಪ್ಪರ್ ಹಿಂದಕ್ಕೆ ಚಲಿಸುತ್ತಿದ್ದಾಗ ಅದರ ಹಿಂದಿದ್ದ ವ್ಯಕ್ತಿಗೆ ಬಡಿದ ಪರಿಣಾಮ ಮೃತಪಟ್ಟ ಘಟನೆ ವರದಿಯಾಗಿದೆ.

ಅಸೋಡು ಗ್ರಾಮದ ರಾಘವೇಂದ್ರ ಎಂಬುವವರ ಮನೆಯ ಬಾವಿಯ ಆವರಣ ಕಟ್ಟುವ ಬಗ್ಗೆ ಮರಳು ತುಂಬಿದ ಟಿಪ್ಪರ್‌ ವಾಹನ ಮನೆಯ ಬಳಿ ಬಂದಿದ್ದು ಮನೆಯ ಅಂಗಳದಲ್ಲಿ ಮರಳನ್ನು ಇಳಿಸಲು ಟಿಪ್ಪರ್‌ ಚಾಲಕನಿಗೆ ತಿಳಿಸಿದ್ದರಿಂದ ಟಿಪ್ಪರ್‌ ವಾಹನದ ಚಾಲಕನು ಟಿಪ್ಪರ್‌ ವಾಹನವನ್ನು ಹಿಂದಕ್ಕೆ ಚಲಾಯಿಸಿದ ಪರಿಣಾಮ ಟಿಪ್ಪರ್‌ನ ಹಿಂದೆ ನಿಂತಿದ್ದ ರಾಘವೇಂದ್ರರಿಗೆ ಡಿಕ್ಕಿ ಹೊಡೆದ ಪರಿಣಾಮ ರಾಘವೇಂದ್ರ ರವರು ಟಿಪ್ಪರ್‌ ವಾಹನ ಹಾಗೂ ಮನೆಯ ಗೇಟಿನ ಪಿಲ್ಲರ್‌ ಮಧ್ಯೆ ಸಿಲುಕಿಕೊಂಡಿದ್ದಾರೆ.

ಅವರ ತಲೆಯ ಭಾಗಕ್ಕೆ ತೀವೃ ಸ್ವರೂಪದ ಗಾಯವಾಗಿ ರಕ್ತ ಸ್ರಾವವಾಗುತ್ತಿದ್ದು, ಕೂಡಲೇ ರಾಘವೇಂದ್ರರವರನ್ನು ಕೋಟೇಶ್ವರದ ಎನ್‌.ಆರ್‌ ಆಚಾರ್ಯ ಆಸ್ಪತ್ರೆಗೆ ಕರೆದುಕೊಂಡು ಹೋದಾಗ ವೈದ್ಯರು ಪರೀಕ್ಷಿಸಿ ಮೃತ ಪಟ್ಟಿರುವುದಾಗಿ ತಿಳಿಸಿರುತ್ತಾರೆ.

ಈ ಬಗ್ಗೆ ಕುಂದಾಪುರ ಗ್ರಾಮಾಂತರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 17/2024,ಕಲಂ: 304(A) ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

Latest Indian news

Popular Stories