
Udupi
ಉಡುಪಿ | ಹತ್ಯೆಯಾದ ನಾಲ್ವರ ದಫನ ಕಾರ್ಯದ ಸಂದರ್ಭದಲ್ಲಿ ಬಂದಂತಹ ನೂರಾರು ಜನರಿಗೆ ತಂಪು ಪಾನೀಯ ನೀಡಿ ಸೌಹಾರ್ದ ಮೆರೆದ ಕೋಡಿಬೆಂಗ್ರೆಯ ಮಹಾಬಲ ತೋಳಾರ್
ಉಡುಪಿ: ಇಡೀ ರಾಜ್ಯವೇ ಬೆಚ್ಚಿ ಬಿದ್ದ ನೇಜಾರಿನ ತಾಯಿ ಮತ್ತು ಮೂವರು ಮಕ್ಕಳ ಹತ್ಯಾ ಪ್ರಕರಣದಲ್ಲಿ ಮೃತಪಟ್ಟವರನ್ನು ಸೋಮವಾರ ಕೋಡಿಬೆಂಗ್ರೆ ಜಾಮಿಯಾ ಮಸೀದಿ ದಫನ ಭೂಮಿಯಲ್ಲಿ ಅಂತ್ಯ ಸಂಸ್ಕಾರ ನಡೆಸಲಾಯಿತು.
ಈ ಕಾರ್ಯದಲ್ಲಿ ಸಾವಿರಾರು ಮುಸ್ಲಿಮ್ ಬಾಂಧವರು ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಬಿಸಿಲ ಬೇಗೆಗೆ ದಣಿದಿದ್ದ ಜನರಿಗೆ ತಂಪು ಪಾನೀಯ ಒದಗಿಸಿ ಮಹಾಬಲ ತೋಳಾರ್ ಮಾನವೀಯತೆಯೊಂದಿಗೆ ಸೌಹಾರ್ದ ಮೆರೆದಿದ್ದಾರೆ.
ಮಾಹಿತಿಯ ಪ್ರಕಾರ ಪ್ರತಿ ಬಾರಿ ಸಾವು ನೋವು ಸಂಬಂವಿಸಿ ದಫನ ಕಾರ್ಯಕ್ಕೆ ಬಂದ ಜನರಿಗೆ ಇವರು ಸಹಜವಾಗಿ ಉಪಚರಿಸುತ್ತಾರೆ, ಇವರ ಕಾರ್ಯ ಶ್ಲಾಘನೀಯ. ಇದೊಂದು ಮಾದರಿ ಯೋಗ್ಯ ಕಾರ್ಯ. ಅವರ ಈ ಸೌಹಾರ್ದ ನಡೆಗೆ ನಮ್ಮ ಕೃತಜ್ಞತೆಗಳು ಎಂದು ಕೋಡಿಬೆಂಗ್ರೆ ಜಾಮೀಯಾ ಮಸೀದಿಯ ಕಾರ್ಯದರ್ಶಿ ಬಿಕೆ ಜಮಾಲ್ ತಿಳಿಸಿದ್ದಾರೆ.




