
Udupi
ಮಲ್ಪೆ: ಯುವಕ ನಾಪತ್ತೆ
ಮಲ್ಪೆ: ಗೌತಮ್ ಪ್ರಾಯ:31 ವರ್ಷ ಈತನು ಕಿನ್ನಿಮೂಲ್ಕಿ ವಾಟರ್ ಸರ್ವಿಸ್ ನಲ್ಲಿ ಕೆಲಸಮಾಡಿಕೊಂಡಿದ್ದು ಈತನು ದಿನಾಂಕ:18/08 /2024ರಂದು ಬೆಳಿಗ್ಗೆ 9:30 ಗಂಟೆಗೆ ಗೌತಮ್‌ಮನೆಗೆ ಬಂದಿದ್ದು ಬಳಿಕ ಬೆಳಿಗ್ಗೆ 10:00 ಗಂಟೆಗೆ ಮನೆಯಿಂದ ಹೊರಗೆ ಹೋಗಿರುತ್ತಾನೆ.
ದಿನಾಂಕ:19/08/2024 ರಂದು ಬೆಳಿಗ್ಗೆ 08:30 ಗಂಟೆಗೆ ಗೌತಮನು ಕನ್ನರಪಾಡಿ ಗೋಪುರದ ಹತ್ತಿರ ವಿರುವ ಹೋಟೆಲ್ ಬಳಿ ಇರುವುದನ್ನು ತಾಯಿ ನೋಡಿರುತ್ತಾರೆ. ಬಳಿಕ ಗೌತಮ್ ಈ ತನಕ ಸಂಬಂಧಿಕರ ಮನೆಗೂ ಹೋಗದೆ ಮನೆಗೂ ಬಾರದೆ ಕಾಣೆಯಾಗಿರುತ್ತಾರೆ.
ಈ ಬಗ್ಗೆ ಮಲ್ಪೆ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ: 109/2024 ಕಲಂ: ಮನುಷ್ಯ ಕಾಣೆಯಂತೆ ಪ್ರಕರಣ ದಾಖಲಾಗಿರುತ್ತದೆ.




