ಮಲ್ಪೆ ಬೀಚ್’ನಲ್ಲಿ ಹೊಡೆದಾಟ – ಪ್ರಕರಣ ದಾಖಲು

 

ಮಲ್ಪೆ: ಬೀಚ್ ನಲ್ಲಿ ಹೊಡೆದಾಡಿಕೊಂಡ ಘಟನೆಗೆ ಸಂಬಂಧಿಸಿದಂತೆ ಪ್ರಕರಣವೊಂದು ದಾಖಲಾಗಿದೆ.

ಪಡುಬಿದ್ರಿ ಘಟಕದಲ್ಲಿ ಗೃಹ ರಕ್ಷಕ ಸಿಬ್ಬಂದಿಯಾಗಿರುವ ಪ್ರಸನ್ನ ಕುಮಾರ್ ಮಲ್ಪೆ ಬೀಚ್‌ ನಲ್ಲಿ ಕರ್ತವ್ಯ ನಿರ್ವಹಿಸಿಕೊಂಡಿರುವಾಗ ಸಂಜೆ ಸುಮಾರು 05:45 ಗಂಟೆ ಹೊತ್ತಿಗೆ ಬೀಚ್‌ ನ ಜೋಬಿನ್‌ ಎಂಬ ಜಲಕ್ರೀಡೆಯ ಬಳಿ ಯಾರೋ ಅಪರಿಚಿತರು 15-20 ಜನರ ಒಂದು ಗುಂಪು ಹಾಗೂ 10-15 ಜನರ ಇನ್ನೊಂದು ಗುಂಪಿನ ನಡುವೆ ಪರಸ್ಪರ ಗಲಾಟೆ ಆಗುತ್ತಿದ್ದು, ಸಾರ್ವಜನಿಕ ಸ್ಥಳವಾದ ಮಲ್ಪೆ ಬೀಚ್‌ನಲ್ಲಿ ಎರಡು ಗುಂಪು ಕಟ್ಟಿಕೊಂಡು ಹೊಡೆದಾಡಿ ಸಾರ್ವಜನಿಕ ಶಾಂತಿ ಕದಡಿದ ಸಾರ್ವಜನಿಕರ ಸ್ಥಳದಲ್ಲಿ ಹೊಡೆದಾಟ ಮಾಡಿದವರ ವಿರುದ್ಧ ಕ್ರಮ ಕೈಗೊಳ್ಳುವಂತೆ ದೂರು ನೀಡಿದ್ದಾರೆ.

ಈ ಬಗ್ಗೆ ಮಲ್ಪೆ ಠಾಣೆ ಅಪರಾಧ ಕ್ರಮಾಂಕ 136/2023 ಕಲಂ:160 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

Latest Indian news

Popular Stories