ಮಣಿಪಾಲ: ಭೀಕರ ಅಪಘಾತ ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಯ ಮೂಳೆ ತಜ್ಞ ಡಾಕ್ಟರ್ ಸೂರ್ಯ ನಾರಾಯಣ ಮೃತ್ಯು

ಮಣಿಪಾಲದ ರಜಾತಾದ್ರಿ ಜಿಲ್ಲಾಧಿಕಾರಿ ಕಚೇರಿ ಬಳಿಯ ರಸ್ತೆಯಲ್ಲಿ ನಡೆದ ಭೀಕರ ಅಪಘಾತದಲ್ಲಿ ಮಣಿಪಾಲದ ಕಸ್ತೂರ್ಬಾ ಹಾಸ್ಪಿಟಲ್ ಮೂಳೆ ತಜ್ಞ ಡಾಕ್ಟರ್ ಸೂರ್ಯ ನಾರಾಯಣ ಯಾನೆ ಡಾಕ್ಟರ್ ಸೂರಿ ಸ್ಥಳದಲ್ಲಿ ಸಾವನ್ನಪ್ಪಿದ್ದಾರೆ.


ಹೋಟೆಲ್ ಹಾಟ್ ಅಂಡ್ ಸ್ಪೈಸಿ ಎದುರುಗಡೆ ಕಡಿದಾದ ತಿರುವಿನ್ನಲ್ಲಿ ನಿಯಂತ್ರಣ ತಪ್ಪಿದ ಕಾರು ಮೊದಲು ರಸ್ತೆ ವಿಭಜಕೆ ಡಿಕ್ಕಿ ಹೊಡೆದು ನಂತರ ಪಲ್ಟಿಯಾಗಿದೆ. ಈ ಸಂದರ್ಭದಲ್ಲಿ ಡಾ.ಸೂರ್ಯ ನಾರಾಯಣ ತಲೆಗೆ ತೀವ್ರವಾಗಿ ಗಾಯಗಳಾಗಿ ಸ್ಥಳದಲ್ಲಿ ಮೃತರಾಗಿದ್ದಾರೆ. ಈ ಕುರಿತು ಮಣಿಪಾಲ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Latest Indian news

Popular Stories