ಮಣಿಪಾಲ: ರೆಸಿಡೆನ್ಸಿಯಲ್ಲಿ ವೇಶ್ಯಾವಟಿಕೆ – ಮೂವರ ಬಂಧನ

ಮಣಿಪಾಲ: ರೆಸಿಡೆನ್ಸಿಯೊಂದರಲ್ಲಿ ವೇಶ್ಯಾವಟಿಕೆ ನಡೆಸುತ್ತಿದ್ದ ಮೂವರನ್ನು ಪೊಲೀಸರು ಬಂಧಿಸಿದ್ದಾರೆ.

ಮಹಿಳೆಯರನ್ನು ಪುಸಲಾಯಿಸಿ ಕರೆ ತಂದು ಅಕ್ರಮ ವೇಶ್ಯಾವಾಟಿಕೆಗೆ ಕಳುಹಿಸಿಕೊಡುತ್ತಿರುವ ಬಗ್ಗೆ ಬಂದ ಮಾಹಿತಿಯಂತೆ ಸ್ಥಳಕ್ಕೆ ಸಿಬ್ಬಂದಿಯವರೊಂದಿಗೆ ದಾಳಿನಡೆಸಿ ಆರೋಪಿ ಪವನ್‌ ಎಂಬವನನ್ನು ಮೊದಲು ವಶಕ್ಕೆ ಪಡೆದಿದ್ದಾರೆ. ನಂತರ ಆತನ ಹೇಳಿಕೆಯಂತೆ‌ ಶೋಧನಾ ವಾರೆಂಟ್‌ನ್ನು ಪಡೆದುಕೊಂಡು ದಾಳಿ ನಡೆಸಿ ಆರೋಪಿ ಚೇತನ್‌ ಸಿ.ಬಿ. ಮತ್ತು ಆರೋಪಿ ಪಂಜು ಎಂಬವರನ್ನು ವಶಕ್ಕೆ ಪಡೆದು ಕೊಳ್ಳಲಾಗಿದೆ.

ಈ ಬಗ್ಗೆ ಮಣಿಪಾಲ ಠಾಣಾ ಅಪರಾಧ ಕ್ರಮಾಂಕ: 29/2024 ಕಲಂ: 3, 4, 5, 6 ITP Act And 370 ಐಪಿಸಿ ಯಂತೆ ಪ್ರಕರಣ ದಾಖಲಿಸಲಾಗಿದೆ.

Latest Indian news

Popular Stories