
ಉಡುಪಿಯ ಜಾಮಿಯಾ ಮಸೀದಿಯಲ್ಲಿ ನಾಳೆ ಮಸೀದಿ ಸಂದರ್ಶನ ಕಾರ್ಯಕ್ರಮ
ಭಾರತ ವೈವಿಧ್ಯಮಯ ಸಂಸ್ಕ್ರತಿ ಮತ್ತು ವಿಚಾರಧಾರೆಗಳ ನೆಲೆವೀಡು ಈ ಹಿನ್ನೆಲೆಯಲ್ಲಿ ಈ ಬಹುತ್ವದ ಶ್ರೀಮಂತ ಪರಂಪರೆಯ ವಾರಿಸುದಾರಿಕೆ ನಿಭಾಯಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಈ ಹೊಣೆಗಾರಿಕೆಯ ನಿಭಾವಣೆಗೆ ಹೆಗಲು ಕೊಡಲು ಪರಸ್ಪರನ್ನು ತಿಳಿದುಕೊಳ್ಳುವುದು ಹಾಗೂ ವಿವಿಧ ಸಂಸ್ಕೃತಿಗಳ ಪರಿಚಯ ಪಟ್ಟುಕೊಳ್ಳುವು ಅತ್ಯವಶ್ಯಕ ಈ ಹಿನ್ನೆಲೆಯಲ್ಲಿ ಶನಿವಾರ ತಾ- 04-03-2023 ಉಡುಪಿಯ ಜಾಮಿಯಾ ಮಸೀದಿಯಲ್ಲಿ ಸರ್ವಧರ್ಮಿಯರಿಗಾಗಿ ಮಸೀದಿ ಸಂದರ್ಶನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ .
ಈ ಕಾರ್ಯಕ್ರಮದಲ್ಲಿ ಮಸೀದಿಯಲ್ಲಿ ನಡೆಯುವ ಚಟುವಟಿಕೆಗಳು ಮತ್ತು ನಾಡಿನ ಮುಸ್ಲಿಮ್ ಸಂಸ್ಕೃತಿಯ ಪ್ರದರ್ಶನ ನಡೆಯಲಿದೆ . ಇದೊಂದು ಸಾಂಸ್ಕೃತಿಕ ಕಾರ್ಯಕ್ರಮವಾಗಿದ್ದು ಸರ್ವಧರ್ಮಿಯರು ಕುಟುಂಬ ಸಮೇತ ವೀಕ್ಷಿಸಬೇಕೆಂದು ಜಮಾತೆ ಇಸ್ಲಾಮಿ ಹಿಂದ್, ಉಡುಪಿ ಮತ್ತು ಈ ಕಾರ್ಯಕ್ರಮದ ಸ್ವಾಗತ ಸಮಿತಿ ಅಪೇಕ್ಷಿಸುತ್ತದೆ ಎಂದು ಮಸೀದಿ ಸಂದರ್ಶನ ಕಾರ್ಯಕ್ರಮದ ಸ್ವಾಗತ ಸಮಿತಿಯ ಕಾರ್ಯದರ್ಶಿ ಅಬ್ದುಲ್ ಅಝೀಝ್ ಉದ್ಯಾವರ ಅವರು ತಮ್ಮ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.




