
Udupi
ನೇಜಾರು ಕೊಲೆ ಪ್ರಕರಣ: ಆರೋಪಿ ಪ್ರವೀಣ್ ಚೌಗ್ಲೆಗೆ 14 ದಿನ ಪೊಲೀಸ್ ಕಸ್ಟಡಿ
ಉಡುಪಿ: ನೇಜಾರು ಕೊಲೆ ಪ್ರಕರಣದ ಆರೋಪಿ ಪ್ರವೀಣ್ ಚೌಗಲೆ ಇಂದು ಪೊಲೀಸ್ ಬಿಗಿ ಭದ್ರತೆಯಲ್ಲಿ ಉಡುಪಿಯ ಸತ್ರ ನ್ಯಾಯಾಲಯಕ್ಕೆ ಹಾಜರು ಪಡಿಸಲಾಯಿತು.
ಅವರಿಗೆ ಹದಿನಾಲ್ಕು ದಿನ ಪೊಲೀಸ್ ಕಸ್ಟಡಿಗೆ ನೀಡಿ ಒಂದನೇ ಹೆಚ್ಚುವರಿ ಸಿವಿಲ್ ನ್ಯಾಯಾಧೀಶರು ಹಾಗೂ ಪ್ರಥಮ ದರ್ಜೆ ನ್ಯಾಯಿಕ ದಂಡಾಧಿಕಾರಿಗಳ ನ್ಯಾಯಾಲಯ ಆದೇಶಿಸಿದೆ.
ಆರೋಪಿಯು ಆಯ್ನಾಝ್’ಳನ್ನು ಕೊಲ್ಲಲು ಬಂದಾಗ ತಡೆಯಲು ಬಂದ ಇತರ ಮೂವರನ್ನು ಹತ್ಯೆಗೈದಿದ್ದ. ಕೊಲೆಯ ಮೂರು ಉದ್ದೇಶವನ್ನು ವಿಚಾರಣೆಯಲ್ಲಿ ಆರೋಪಿಯು ತಿಳಿಸಿದ್ದು ಕುಟುಂಬಸ್ಥರೊಂದಿಗೆ ಈ ಕುರಿತು ವಿಚಾರಿಸಿ ಸ್ಪಷ್ಟ ಪಡಿಸಿಕೊಳ್ಳಲಾಗುವುದೆಂದು ತಿಳಿಸಿದ್ದಾರೆ.
ಆರೋಪಿಯನ್ನು ಇಂದು ನ್ಯಾಯಾಲಯಕ್ಕೆ ಹಾಜರು ಪಡಿಸುವ ಮುನ್ನ ನ್ಯಾಯಾಲಯದ ಆವರಣದಲ್ಲಿ ಸೇರಿದಂತೆ ಬಿಗಿ ಭದ್ರತೆ ಏರ್ಪಾಡಿಸಲಾಗಿತ್ತು. ಮೂವರು ಡಿವೈಎಸ್ಪಿ, 25 ಎಎಸ್‌ಐ, ಐವರು ಪಿಎಸ್‌ಐ, ಮೂವರು ಇನ್‌ಸ್ಪೆಕ್ಟರ್‌ಗಳು, 150 ಕಾನ್‌ಸ್ಟೆಬಲ್‌ಗಳು, ಆರು ಡಿಎಆರ್ ಬೆಟಾಲಿಯನ್‌ಗಳು ಮತ್ತು ಮೂವರು ಕೆಎಸ್‌ಆರ್‌ಪಿ ಸಿಬ್ಬಂದಿಗಳನ್ನು ಭದ್ರತೆಗೆ ನಿಯೋಜಿಸಲಾಗಿತ್ತು.




